ಕಾಸರಗೋಡು: ಈ ಬಾರಿಯ ಕೇರಳ ಎಸ್ಸೆಸೆಲ್ಸಿ ಫಲಿತಾಂಶ ಮೇ 8ರಂದು ಪ್ರಕಟಗೊಳ್ಳಲಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ 11ದಿವಸ ಮುಂಚಿತವಾಗಿ ಫಲಿತಾಂಶ ಹೊರಬೀಳಲಿರುವುದಾಗಿ ಶಿಕ್ಷಣ ಸಚಿವ ಪಿ. ಶಿವನ್‍ಕುಟ್ಟಿ ತಿಳಿಸಿದ್ದಾರೆ. ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಫಲಿತಾಂಶ ಮೇ 9ರಂದು ಪ್ರಕಟಗೊಳ್ಳಲಿದೆ.
ಈ ಬಾರಿ 4,27,105ಮಂದಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 2,17,525 ಬಾಲಕರು ಹಾಗೂ 2,09,580ಮಂದಿ ಬಾಲಕಿಯರಾಗಿದ್ದಾರೆ. ರಾಜ್ಯದಲ್ಲಿ 70ಕೇಂದ್ರಗಳಲ್ಲಾಗಿ 10,863 ಮಂದಿ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು. ಏ. 3ರಿಂದ 20ರ ವರೆಗೆ ಮೌಲ್ಯಮಾಪನ ನಡೆದಿತ್ತು. ಕಳೆದ ವರ್ಷ ಮೇ 25ರಂದು ಹೈಯರ್ ಸೆಕೆಂಡರಿ ಫಲಿತಾಂಶ ಪ್ರಕಟಗೊಂಡಿತ್ತು.