ಬದಿಯಡ್ಕ: ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಊರೂರುಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಈ ಮಣ್ಣಿನ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕಾರ್ಯ ಶ್ಲಾಘನೀಯ ಎಂದು ಸುಂದರ ಶೆಟ್ಟಿ ಕೊಲ್ಲಂಗಾನ ಹೇಳಿದರು.
ಅವರು ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಾನ್ಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಆಯೋಜಿಸಿದ್ದ ಗ್ರಾಮ ಪರ್ಯಟನೆಯ ಎಂಟನೇ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು.
ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಎಂ, ಪದಾಧಿಕಾರಿ ರಾಮ ಮಾನ್ಯ, ರಂಗಸಿರಿಯ ಸಂಗೀತ ಶಿಕ್ಷಕಿ ಸಂಗೀತ ವಿದುಷಿ ಗೀತಾ ಸಾರಡ್ಕ ಶುಭ ಹಾರೈಸಿದರು. ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ಅನ್ವಿತ ಟಿ ಹಾಗೂ ಸುಮೇಧ ಕೆ ಪ್ರಾರ್ಥಿಸಿದರು. ಅಭಿಜ್ಞಾ ಭಟ್ ಬೊಳುಂಬು ಸ್ವಾಗತಿಸಿದರು. ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿ ವಂದಿಸಿದರು.
ಬಳಿಕ ಸಂಗೀತ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ನಿರ್ದೇಶನದಲ್ಲಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಮೃದಂಗದಲ್ಲಿ ವಿಶ್ವಾಸ್ ಪದ್ಯಾಣ ಹಾಗೂ ವಯಲಿನ್ ನಲ್ಲಿ ಅನ್ವಿತಾ ತಲ್ಪನಾಜೆ ಹಾಗೂ ಸುಮೇಧಾ ಕಲ್ಲಕಟ್ಟ ಸಹಕರಿಸಿದರು.