HEALTH TIPS

ತಮಿಳುನಾಡು: ಕೆರೆಯಲ್ಲಿ ಮುಳುಗಿದ 810 ಕೆ.ಜಿ ಚಿನ್ನಾಭರಣಗಳಿದ್ದ ಟ್ರಕ್‌

         ರೋಡ್‌: ತಮಿಳುನಾಡಿನಲ್ಲಿ ₹ 666 ಕೋಟಿ ಮೌಲ್ಯದ 810 ಕೆ.ಜಿ ಚಿನ್ನದ ಆಭರಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಯಲ್ಲಿ ಮುಳುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

                ಸೋಮವಾರ ರಾತ್ರಿ ಈರೋಡ್‌ ಸಮೀಪ ಚಿತ್ತೊಡ್‌ ಬಳಿ ಈ ಘಟನೆ ನಡೆದಿದೆ.

          ಖಾಸಗಿ ಲಾಜಿಸ್ಟಿಕ್‌ ಕಂಪನಿಗೆ ಸೇರಿದ ಈ ವಾಹನ ಕೊಯಮತ್ತೂರಿನಿಂದ ಸೇಲಂಗೆ ಹೊಗುತ್ತಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಕೆರೆಯಲ್ಲಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲಿನರ್‌ಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

                ಚಿನ್ನಾಭರಣಗಳಿಗೆ ಯಾವುದೇ ಹಾನಿಯಾಗಿಲ್ಲ. ಮುಳುಗಿರುವ ಟ್ರಕ್‌ನಿಂದ ಅವುಗಳನ್ನು ತೆಗೆದು ಬೇರೆ ವಾಹನದಲ್ಲಿ ಸಾಗಿಸಲಾಯಿತು. ಈ ಘಟನೆ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.                


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries