ಕಾಸರಗೋಡು: ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಕಿಳಕ್ಕರೆಯ ತಾಯತ್ ಮನೆಯ ರವೀಂದ್ರನ್ ಅವರ ಪುತ್ರಿ ಶ್ರೀನಂದಾ (13) ಮೃತ ಬಾಲಕಿ.
ಆಕೆ ಪಾಕ್ಕಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ.
ಭಾನುವಾರ ರಾತ್ರಿ ನೃತ್ಯ ಅಭ್ಯಾಸದ ವೇಳೆ ಈ ದಾರುಣ ಘಟನೆ ನಡೆದಿದೆ. ಮಗು ಕುಸಿದು ಬಿದ್ದ ತಕ್ಷಣ ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಕರೆತಂದರೂ ಪ್ರಾಣ ಉಳಿಸಲಾಗಲಿಲ್ಲ. ಅಜಿತಾ ತಾಯಿ. ಶ್ರೀಕುಟ್ಟಿ ಮತ್ತು ಶ್ರೀನಾಥ್ ಸಹೋದರರು.