ತಿರುವನಂತಪುರಂ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆಯದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಎಸ್‍ಇ (ಸೇ)ಪರೀಕ್ಷೆಯನ್ನು ಮೇ 28 ರಿಂದ ಜೂನ್ 6 ರವರೆಗೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ತಿಳಿಸಿದ್ದಾರೆ.
ಜೂನ್ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಅರ್ಹತೆ ಪಡೆಯದ ವಿದ್ಯಾರ್ಥಿಗಳು ಮೂರು ವಿಷಯಗಳಿಗೆ ಎಸ್‍ಇ ಪರೀಕ್ಷೆಯಲ್ಲಿ ಹಾಜರಾಗಬಹುದು ಎಂದು ಸಚಿವರು ಹೇಳಿದರು.
ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದವರ ಪ್ರಮಾಣಪತ್ರಗಳು ಜೂನ್ ಮೊದಲ ವಾರದಿಂದ ಡಿಜಿ ಲಾಕರ್‍ನಲ್ಲಿ ಲಭ್ಯವಿರುತ್ತವೆ. ಮರುಮೌಲ್ಯಮಾಪನ, ಪರಿಶೀಲನೆ ಮತ್ತು ಉತ್ತರ ಪತ್ರಿಕೆಗಳ ನಕಲು ಪ್ರತಿಗೆ ಮೇ 9 ರಿಂದ ಮೇ 15 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಎಸ್.ಎಸ್.ಎಲ್.ಸಿ., ಟಿ.ಎಚ್.ಎಸ್.ಎಲ್.ಸಿ., ಎ.ಎಚ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ 2023-24 ಪ್ರಕಟಿಸಲಾಗಿದೆ. 99.69 ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ 99.70ರಷ್ಟು ಉತ್ತೀರ್ಣರಾಗಿದ್ದರು. ಕಳೆದ ವರ್ಷಕ್ಕಿಂತ ಉತ್ತೀರ್ಣರ ಪ್ರಮಾಣ ಸ್ವಲ್ಪ ಕಡಮೆಯಾಗಿದೆ.
71831 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಕೊಟ್ಟಾಯಂ ಜಿಲ್ಲೆ ಅತಿ ಹೆಚ್ಚು ವಿಜೇತರನ್ನು ಹೊಂದಿದೆ. ಇಲ್ಲಿ ಶೇ.99.92 ತೇರ್ಗಡೆಯಾಗಿದೆ. ಕಡಮೆ ತಿರುವನಂತಪುರ. ಮಲಪ್ಪುರಂ ಅತಿ ಹೆಚ್ಚು ಪೂರ್ಣ ಎ ಪ್ಲಸ್ ಹೊಂದಿರುವ ಜಿಲ್ಲೆಯಾಗಿದೆ. 4934 ಮಕ್ಕಳು ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಪಡೆದಿದ್ದಾರೆ. 892 ಸರ್ಕಾರಿ ಶಾಲೆಗಳು ಶೇ 100ರಷ್ಟು ಉತ್ತೀರ್ಣವಾಗಿವೆ. 1139 ಅನುದಾನಿತ ಶಾಲೆಗಳು ಹಾಗೂ 443 ಅನುದಾನ ರಹಿತ ಶಾಲೆಗಳು ಶೇ 100ರಷ್ಟು ಉತ್ತೀರ್ಣಗೊಂಡಿವೆ.