ತಿರುವನಂತಪುರಂ: ಒಂದು ತಿಂಗಳ ಕಲ್ಯಾಣ ಪಿಂಚಣಿ ವಿತರಣೆಗೆ ಸರ್ಕಾರ 900 ಕೋಟಿ ರೂ.ಬಿಡುಗಡೆಮಾಡಿದೆ. ಇದೇ 29 ರಿಂದ ಪಿಂಚಣಿ ವಿತರಿಸಲಾಗುವುದು ಎಂದು ಹಣಕಾಸು ಸಚಿವರ ಕಚೇರಿ ಮಾಹಿತಿ ನೀಡಿದೆ.
ಪಿಂಚಣಿಯನ್ನು ನೇರವಾಗಿ ಪಡೆಯುವವರು ಸಹಕಾರಿ ಸಂಘಗಳ ಮೂಲಕ ಮತ್ತು ಪಡೆಯದವರು ಬ್ಯಾಂಕ್ ಖಾತೆಯ ಮೂಲಕ ಮೊತ್ತವನ್ನು ಪಡೆಯುತ್ತಾರೆ. ತಿಂಗಳಿಗೆ 1600 ಪಿಂಚಣಿ ಲಭಿಸಲಿದೆ. ಪಿಂಚಣಿಯ ಡೇಟಾ ಬೇಸ್‍ನಲ್ಲಿ 64 ಲಕ್ಷ ಜನರಿದ್ದಾರೆ.