ತಿರುವನಂತಪುರಂ: ಕೇರಳದಲ್ಲಿ ಎಸ್.ಎಸ್.ಎಲ್.ಸಿ., ಟಿ.ಎಚ್.ಎಸ್.ಎಲ್.ಸಿ., ಎಎಚ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ 2023-24 ಇಂದು ಪ್ರಕಟಿಸಲಾಗಿದೆ.
99.69 ರಷ್ಟು ಉತ್ತೀರ್ಣತೆ ದಾಖಲಾಗಿದ್ದು, 71831 ಮಂದಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಗೊಂಡು ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇ.99.92 ತೇರ್ಗಡೆಯಾಗಿದೆ.
ಕೇರಳ, ಲಕ್ಷದ್ವೀಪ ಮತ್ತು ಗಲ್ಫ್ ಪ್ರದೇಶಗಳ 2970 ಕೇಂದ್ರಗಳಲ್ಲಿ ಒಟ್ಟು 427153 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಫಲಿತಾಂಶ ಪ್ರಕಟಿಸಿದರು. ಸಂಜೆ 4 ಗಂಟೆಯಿಂದ ವೆಬ್‍ಸೈಟ್‍ಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಕಳೆದ ವರ್ಷ ಮೇ 19 ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಹನ್ನೊಂದು ದಿನಗಳ ಮೊದಲೇ ಫಲಿತಾಂಶ ಪ್ರಕಟವಾಗಿದೆ.
2023-24ನೇ ಶೈಕ್ಷಣಿಕ ವಷರ್Àದ ದ್ವಿತೀಯ ವರ್ಷದ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶಗಳು ನಾಳೆ (9ರಂದು)ಪ್ರಕಟಗೊಳ್ಳಲಿದೆ . ನಾಳೆ ಮಧ್ಯಾಹ್ನ ಮೂರು ಗಂಟೆಗೆ ಪ್ರಕಟಗೊಳ್ಳುವುದು.