HEALTH TIPS

ಕೇರಳಾದ್ಯಂತ ಜೂ. 9ರಿಂದ ಟ್ರಾಲಿಂಗ್ ನಿಷೇಧ

               ಕಾಸರಗೋಡು: ಕೇರಳಾದ್ಯಂತ ಜೂನ್ 9ರಿಂದ ಮೀನುಗಾರಿಕೆ(ಟ್ರಾಲಿಂಗ್) ನಿಷೇಧ ಜಾರಿಗೆ ಬರಲಿದೆ. 9ರಂದು ಮಧ್ಯ ರಾಥ್ರಿ 12ರಿಂದ ಜುಲೈ31ರ ಮಧ್ಯ ರಾತ್ರಿ ವರೆಗೆ ಟ್ರಾಲಿಂಗ್ ನಿಷೇಧ ಜಾರಿಯಲ್ಲಿರಲಿದೆ. ಕೇರಳದಲ್ಲಿ ಒಟ್ಟು 51ದಿವಸಗಳ ಕಾಳ ಟ್ರಾಲಿಂಗ್ ನಿಷೇಧ ಜಾರಿಯಲ್ಲಿರುವುದಾಗಿ ಮೀನುಗಾರಿಕಾ ಸಚಿವ ಸಜಿ ಚೆರಿಯನ್ ಅಧ್ಯಕ್ಷತೆಯಲ್ಲಿ ನಡೆದ ಅವಲೋಕನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

             ಟ್ರಾಲಿಂಗ್ ನಿಷೇಧ ಕಾಲಾವಧಿಯಲ್ಲಿ ಪಾರಂಪರಿಕ ಮೀನುಗಾರಿಕೆ ಹೊರತಾಗಿ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲದ ಆರಂಭದ ಎರಡು ತಿಂಗಳ ಕಾಲ ಮೀನುಗಳ ಸಂತಾನೋತ್ಪತ್ತಿ ಕಾಲಾವಧಿಯಾಗಿರುವುದರಿಂದ ಈ ಎರಡು ತಿಂಗಳ ಕಾಲ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗುತ್ತಿದೆ. ಖಮಟ್ರೋಲ್ ರಊಮ್ ಕಾರ್ಯಾರಂಭ:

            ಸಮುದ್ರದಲ್ಲಿ ಆಳೆತ್ತರದ ಅಲೆಗಳು ಎದ್ದೇಳುತ್ತಿರುವುದಲ್ಲದೆ, ವ್ಯಾಪಕ ಸಮುದ್ರ ಕೊರೆತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 24ತಾಸುಗಳ ಕಾಲ ಕಾರ್ಯಾಚರಿಸುವ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ.  ಮೆರೈನ್ ಎನ್‍ಫೋರ್ಸ್‍ಮೆಂಟ್, ಕರಾವಳಿ ಪೊಲೀಸ್, ಭಾರತೀಯ ನೌಕಾ ಪಡೆ ಹಾಗೂ ಭಾರತೀಯ ಕೋಸ್ಟಲ್ ಗಾರ್ಡ್ ಮೀನುಗಾರರ ಸೇವೆಗಾಗಿ ಸಜ್ಜಾಗಿ ನಿಲ್ಲಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries