ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವುದು ಮುಖ್ಯವಾಗಿದೆ. ಪರಿಶೀಲನೆಯ ಉದ್ದೇಶಗಳಿಗಾಗಿ ನೀವು ಬಳಸಬೇಕಾದ ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಸ್ವೀಕರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆಧಾರ್ ಕಾರ್ಡ್‌ಗೆ (Aadhaar Card) ಲಿಂಕ್ ಮಾಡಲಾದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ನಿಮಗೆ ನೆನಪಿಲ್ಲದಿದ್ದರೆ ಈಗ ಚಿಂತಿಸಬೇಕಿಲ್ಲ. ಯಾಕೆಂದರೆ ನೀವು UIDAI ವೆಬ್‌ಸೈಟ್‌ನಿಂದ ಇದನ್ನು ಕೆಲವೇ ನಿಮಿಷಗಳಲ್ಲಿ ಕಂಡುಹಿಡಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
ನಿಮ್ಮ ಆಧಾರ್‌ನೊಂದಿಗೆ ಯಾವ ಮೊಬೈಲ್ ಸಂಖ್ಯೆಯನ್ನು ನಮೂದಿಸಿದೆ ಈ ರೀತಿ ತಿಳಿಯಿರಿ
ಹಂತ 1: ಮೊದಲು ಯಾವುದೇ ಬ್ರೌಸರ್ ತೆರೆಯಿರಿ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) https://uidai.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಚಿಹ್ನೆಯ ಕೆಳಗೆ ನನ್ನ ಆಧಾರ್ ಅನ್ನು ಟ್ಯಾಪ್ ಮಾಡಿ.
ಹಂತ 3: ಈಗ ಸ್ಕ್ರೀನ್ ಮೇಲೆ ಡ್ರಾಪ್-ಡೌನ್ ಮೆನು ಕಾಣಿಸಿಕೊಳ್ಳುತ್ತದೆ. ಆಧಾರ್ ಸೇವೆಗಳ ಅಡಿಯಲ್ಲಿ ನೋಂದಾಯಿತ ಮೊಬೈಲ್ ಅಥವಾ ಇಮೇಲ್ ಐಡಿಯನ್ನು ಪರಿಶೀಲಿಸಿ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಸಿಸ್ಟಂನಲ್ಲಿ ಹೊಸ ಟ್ಯಾಬ್ ತೆರೆಯುತ್ತದೆ. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ, ನೀವು ಯಾವುದನ್ನು ಪರಿಶೀಲಿಸಲು ಬಯಸುತ್ತೀರೋ ಅದನ್ನು ನಮೂದಿಸಿ.
ಹಂತ 5: ಮುಂದೆ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು Send OTP ಅನ್ನು ಕ್ಲಿಕ್ ಮಾಡಿ.
Aadhaar ಮಾಹಿತಿ ಸಿಗದಿದ್ದರೆ ಮುಂದೇನು ಮಾಡಬೇಕು?
ಈಗ ನೀವು ನಮೂದಿಸಿದ ಮೊಬೈಲ್ ಸಂಖ್ಯೆಯು ಯುಐಡಿಎಐ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಅದು ಸ್ಕ್ರೀನ್ ಮೇಲೆ ನೀವು ನಮೂದಿಸಿದ ಮೊಬೈಲ್ ನಮ್ಮ ದಾಖಲೆಗಳೊಂದಿಗೆ ಈಗಾಗಲೇ ಪರಿಶೀಲಿಸಲಾಗಿದೆ ಎಂದು ಫ್ಲ್ಯಾಷ್ ಮಾಡುತ್ತದೆ. ನೀವು ನಮೂದಿಸಿದ ಮೊಬೈಲ್ ಸಂಖ್ಯೆಯು UIDAI ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ನೀವು ನಮೂದಿಸಿದ ಮೊಬೈಲ್ ಸಂಖ್ಯೆಯು ಅವರ ದಾಖಲೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಅದು ಹೇಳುತ್ತದೆ. ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು.