ನವದೆಹಲಿ: ಇತ್ತಿಚಿನ ದಿನಗಳಲ್ಲಿ ನಾವು ಎಲ್ಲೇ ಹೋದರೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಚಾಟ್ ಜಿಪಿಟಿ ಬಗ್ಗೆ ಹೆಚ್ಚು ಕೇಳುತ್ತಿರುತ್ತೇವೆ. ಈಗಾಗಲೇ ನಾವು ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ಕೆಲಸಗಾರರು ಇಲ್ಲದೇ ಯಾವೆಲ್ಲಾ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂಬುದನ್ನು ನೋಡಿದ್ದೇವೆ.

ಈ ಕುರಿತು ಮಾತನಾಡಿರುವ ಕೃತಿವಾಸನ್, ಮುಂದೊಂದು ದಿನ ಇಡೀ ಭಾರತದಾದ್ಯಂತ ಕಾಲ್ ಸೆಂಟರ್ಗಳು ಬಂದ್ ಆಗಲು ಕೃತಕ ಬುದ್ಧಿಮತ್ತೆ ಕಾರಣವಾಗುತ್ತದೆ. ಸುಧಾರಿತ ಕೃತಕ ಬುದ್ಧಿಮತ್ತೆಯು ಉದ್ಯೋಗ ಕಡಿತದ ಮೇಲೆ ಪ್ರಭಾವ ಬೀರಲಿದೆ. ಇಂದು ಎಲ್ಲ ದೇಶಗಳು ಕೃತಕ ಬುದ್ಧಿಮತ್ತೆಯನ್ನು ಹೆಚ್ಚೆಚ್ಚು ಬಳಸಿಕೊಳ್ಳುತ್ತಿವೆ. ಇದು ಉದ್ಯೋಗ ಕಡಿತವಾಗಲು ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಲ್ ಸೆಂಟರ್ಗಳ ಮೇಲೆ ಎಐ ಯಾವ ರೀತಿ ಪರಿಣಾಮ ಬೀರಲಿದೆ ಎಂದರೆ ಮುಂದಿನ ಒಂದು ವರ್ಷದ ಒಳಗಾಗಿ ಅನೇಕ ಕಾಲ್ ಸೆಂಟರ್ಗಳು ಮುಚ್ಚಲಿವೆ. ಇದು ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಭಾರತೀಯ ವೃತ್ತಿಪರರು ಜಾಗತಿಕವಾಗಿ ಎಲ್ಲರಿಗಿಂತಲೂ ಹೆಚ್ಚಾಗಿ ಕೃತಕ ಬುದ್ಧಿಮತ್ತೆ ಕೌಶಲ್ಯಗಳನ್ನು ಬಳಸುತ್ತಾರೆ. ಹೆಚ್ಚು ಕೃತಕ ಬುದ್ಧಿಮತ್ತೆ ಪ್ರತಿಭೆಯನ್ನು ಹೊಂದಿರುವ ಅಗ್ರ ಐದು ದೇಶಗಳಲ್ಲಿ ಭಾರತವು ಸೇರಿದೆ ಎಂದು ಟಿಸಿಎಸ್ ಸಿಇಒ ಕೃತಿವಾಸನ್ ಹೇಳಿದ್ದಾರೆ.