HEALTH TIPS

ಎಲ್ಲಾ ಕಣ್ಣುಗಳು ರಫಾದ ಮೇಲೆ : AI ಸೃಷ್ಟಿಸಿದ ಚಿತ್ರಕ್ಕೆ ಜಾಗತಿಕ ಬೆಂಬಲ

          ನ್ಯೂಯಾರ್ಕ್: ಗಾಝಾ ಬಿಕ್ಕಟ್ಟಿನತ್ತ ಜಾಗತಿಕ ಗಮನವನ್ನು ಕೇಂದ್ರೀಕರಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ `ಎಲ್ಲಾ ಕಣ್ಣುಗಳೂ ರಫಾದ ಮೇಲೆ' ಚಿತ್ರವನ್ನು 4.4 ಕೋಟಿ ಇನ್ಸ್ಟಾಗ್ರಾಮ್ ಬಳಕೆದಾರರು ಮತ್ತು ವಿಶ್ವದ ಪ್ರಮುಖ ಸೆಲೆಬ್ರಿಟಿಗಳು ಶೇರ್ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿದೆ.

           ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಈ ಚಿತ್ರದಲ್ಲಿ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಡೇರೆಗಳಿಂದ ತುಂಬಿದ ವಿಶಾಲವಾದ ಮರುಭೂಮಿಯ ಭೂದೃಶ್ಯವನ್ನು ತೋರಿಸುತ್ತದೆ. (ಈಗ ಮುಂದುವರಿದಿರುವ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡಿರುವ ಫೆಲೆಸ್ತೀನೀಯರು ನೆಲೆಸಿರುವ ದಕ್ಷಿಣ ಗಾಝಾಪಟ್ಟಿಯ ಪ್ರದೇಶವನ್ನು ಈ ಚಿತ್ರ ಹೋಲುತ್ತದೆ).

         `ಎಲ್ಲಾ ಕಣ್ಣುಗಳು ರಫಾದ ಮೇಲೆ' ಎಂಬ ಘೋಷಣಾ ವಾಕ್ಯವನ್ನು ಇತರ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕವಾಗಿ ಶೇರ್ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ `ಎಕ್ಸ್'ನಲ್ಲಿ `ಆಲ್‌ಐಸ್‌ಆನ್ರಫಾ' ಸುಮಾರು 1 ದಶಲಕ್ಷ ಹಿಟ್ಸ್ ಪಡೆದುಕೊಂಡಿದೆ ಎಂದು ಸಂಸ್ಥೆ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries