HEALTH TIPS

ಕೋವಾಕ್ಸಿನ್ ಕುರಿತು ತಪ್ಪುದಾರಿಗೆಳೆಯುವ ಅಧ್ಯಯನ: BHU ಸಂಶೋಧಕರ ವಿರುದ್ಧ ICMR ನಿಂದ ಕಾನೂನು ಕ್ರಮದ ಎಚ್ಚರಿಕೆ

         ನವದೆಹಲಿ: ವಯಸ್ಕರು ಮತ್ತು ಹದಿಹರೆಯದವರಲ್ಲಿ ಕೋವಾಕ್ಸಿನ್‌ನ ದೀರ್ಘಾವಧಿಯ ಸುರಕ್ಷತಾ ವಿಶ್ಲೇಷಣೆ ಕುರಿತು ಇತ್ತೀಚೆಗೆ ಪ್ರಕಟವಾದ BHU ಅಧ್ಯಯನವನ್ನು ಕಳಪೆ ಮಟ್ಟದಾಗಿದೆ ಎಂದು ಸೋಮವಾರ ಹೇಳಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಲೇಖನವನ್ನು ತಪ್ಪಾಗಿ ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದೆ.

           ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (ಬಿಎಚ್‌ಯು) ಅಧ್ಯಯನ ಕಳಪೆಯಿಂದ ಕೂಡಿದ್ದು, ನಿರ್ಣಾಯಕ ನ್ಯೂನತೆಗಳನ್ನು ಹೊಂದಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ ಮತ್ತು ಕೋವಾಕ್ಸಿನ್ ಸುರಕ್ಷತೆಯ ಕುರಿತು ತಪ್ಪುದಾರಿಗೆಳೆಯುವ ಲೇಖನ ಪ್ರಕಟಿಸಿದ್ದಕ್ಕಾಗಿ ಸಂಶೋಧಕರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

           ಕೋವಾಕ್ಸಿನ್ ತೆಗೆದುಕೊಂಡ ಶೇ. 30 ರಷ್ಟು ಜನರು ಪಾರ್ಶ್ವವಾಯು, ತೋಳುಗಳು ಮತ್ತು ಕಾಲುಗಳಲ್ಲಿನ ನರ ದೌರ್ಬಲ್ಯದ ಗುಯಿಲಿನ್-ಬಾರೆ ಸಿಂಡ್ರೋಮ್, ನರ ವೈಜ್ಞಾನಿಕ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗಳು ಮತ್ತಿತರ ಪ್ರತಿಕೂಲ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ. ಈ ಕುರಿತು ಅಧ್ಯಯನದ ಲೇಖಕರು ಮತ್ತು ಜರ್ನಲ್‌ನ ಸಂಪಾದಕರಿಗೆ ಪತ್ರ ಬರೆದಿರುವ ಡಾ. ಬಹ್ಲ್, ಕೂಡಲೇ ಐಸಿಎಂಆರ್‌ಗೆ ಸ್ವೀಕೃತಿಯನ್ನು ತೆಗೆದುಹಾಕಬೇಕು ಮತ್ತು ದೋಷಾರೋಪಣೆಯನ್ನು ಪ್ರಕಟಿಸಬೇಕು ಎಂದು ಹೇಳಿದ್ದಾರೆ.

         ಪತ್ರಿಕೆಯನ್ನು ಪ್ರಕಟಿಸಿದ ಜರ್ನಲ್‌ನ ಸಂಪಾದಕರಿಗೆ ಪ್ರತ್ಯೇಕ ಪತ್ರ ಬರೆದಿರುವ ಡಾ ಬಹ್ಲ್, “ICMR ಈ ಅಧ್ಯಯನದೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ಸಂಶೋಧನೆಗೆ ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲವನ್ನು ನೀಡಿಲ್ಲ. ಇದಲ್ಲದೆ, ಲೇಖಕರು ಯಾವುದೇ ಪೂರ್ವಾನುಮತಿ ಅಥವಾ ICMR ಗೆ ಸೂಚನೆ ಇಲ್ಲದೆ ಸಂಶೋಧನಾ ಬೆಂಬಲಕ್ಕಾಗಿ ICMR ಒಪ್ಪಿಕೊಂಡಿದ್ದಾರೆ ಎನ್ನುವುದು ಅನುಚಿತ ಮತ್ತು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

              ICMR ಟೀಕೆಗಳ ನಂತರ,ಈ ವಿಷಯವನ್ನು ಪರಿಶೀಲಿಸುವುದಾಗಿ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ. ತಜ್ಞ ವೈದ್ಯರಾದ ಡಾ ಅಬ್ಬಿ ಫಿಲಿಪ್ಸ್ ಮತ್ತು ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೋವಿಡ್ ಟಾಸ್ಕ್ ಫೋರ್ಸ್‌ನ ಸಹ-ಅಧ್ಯಕ್ಷ ಡಾ ರಾಜೀವ್ ಜಯದೇವನ್ ಮತ್ತಿತರರು ಸಹ ಅಧ್ಯಯನವನ್ನು ಟೀಕಿಸಿದ್ದಾರೆ. ಅಧ್ಯಯನದ ವಿಧಾನವು ತುಂಬಾ ಕಳಪೆಯಾಗಿದೆ. ಇದು ಯಾವುದೇ ಕಾನೂನುಬದ್ಧ ಪರಿಶೀಲನೆಗೆ ಒಳಗಾಗಿಲ್ಲ ಎಂದು ಡಾ. ಜಯದೇವನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

           ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿಯೂ ಆಗಿರುವ ಡಾ.ಬಹ್ಲಾ, ಲಸಿಕೆ ಪಡೆದ ನಂತರದ ಅವಧಿಯಲ್ಲಿ ಅಂತಹ ಘಟನೆಗಳ ಬದಲಾವಣೆಯನ್ನು ನಿರ್ಣಯಿಸುವುದು ಅಸಾಧ್ಯವಾಗಿದೆ.

        "ದತ್ತಾಂಶ ಸಂಗ್ರಹಣೆಯ ವಿಧಾನವು ಹೆಚ್ಚಿನ ಅಪಾಯವನ್ನು ಹೊಂದಿದೆ. ವ್ಯಾಕ್ಸಿನೇಷನ್ ಮಾಡಿದ ಒಂದು ವರ್ಷದ ನಂತರ ಅಧ್ಯಯನದಲ್ಲಿ ಭಾಗವಹಿಸುವವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ ಮತ್ತು ಕ್ಲಿನಿಕಲ್ ದಾಖಲೆಗಳೊಂದಿಗೆ ಅಥವಾ ವೈದ್ಯರ ಪರೀಕ್ಷೆಯೊಂದಿಗೆ ಯಾವುದೇ ದೃಢೀಕರಣವಿಲ್ಲದೆ ಅವರ ಪ್ರತಿಕ್ರಿಯೆಗಳನ್ನು ದಾಖಲಿಸಲಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

            ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಲಸಿಕೆ ತೆಗೆದುಕೊಂಡವರಿಗೆ ಅಪರೂಪದ ಅಡ್ಡಪರಿಣಾಮಗಳ ಬಗ್ಗೆ ಕಳವಳದ ನಡುವೆ ICMR ಈ ರೀತಿಯ ಹೇಳಿಕೆ ಪ್ರತಿಕ್ರಿಯೆ ನೀಡಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಭಾರತದಲ್ಲಿ ಕೋವಿಶೀಲ್ಡ್ ಮಾರಾಟ ಮಾಡಲಾಗಿತ್ತು. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಕೋವಾಕ್ಸಿನ್‌ನ ತಯಾರಕರು. ಅದರ ಲಸಿಕೆ "ಅತ್ಯುತ್ತಮ ಸುರಕ್ಷತೆಯಿಂದ ಕೂಡಿದೆ ಎಂದು ಹೇಳಲು ಪರ್ಯಾಯ ಅಧ್ಯಯನ ಮಾಡಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries