ಕಾಸರಗೋಡು : ಕಾಇಾಂಗಾಡ್ ಚಿತ್ತಾರಿಕಲ್ ನಲ್ಲಿ ಇಂದು (ಗುರುವಾರ)ಬೆಳಿಗ್ಗೆ 7.30 ರ ಸುಮಾರಿಗೆ ನಿಲುಗಡೆಗೊಂಡಿದ್ದ ಟ್ಯಾಂಕರ್ ಲಾರಿಯಿಂದ ಅಡುಗೆ ಅನಿಲ ಸೋರಿಕೆಯಾಗಿ ಜನರು ದಿಗಿಲುಗೊಂಡು ಅತ್ತಿತ್ತ ಓಡಾಡಿದ ಪ್ರಸಂಗ ನಡೆಯಿತು.
ಇಮಾಯತುಲ್ ಇಸ್ಲಾಂ ಶಾಲೆಯ ಮುಂಬಾಗದಲ್ಲಿ ನಿಲುಗಡೆಗೊಳಿಸಲಾಗಿದ್ದ ಟ್ಯಾಂಕರ್ ಲಾರಿಯಿಂದ ಸೋರಿಕೆ ಉಂಟಾಗಿದೆ. ಇದನ್ನು ಕಂಡು ಅವಘಡ ಸಾಧ್ಯತೆಯನ್ನು ಪರಿಗಣಿಸಿ ಈ ರಸ್ತೆಯಲ್ಲಿ ಸಾಗಬೇಕಾಗಿದ್ದ ವಾಹನಗಳನ್ನು ಹಿಂದಕ್ಕೆ ಕಳುಹಿಸಲಾಯಿತು.
ಮಾಹಿತಿ ಅರಿತು ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಗ್ನನಿರೀಕ್ಷಣಾ ಸೇನೆ ಹಾಗೂ ಸಿವಿಲ್ ಡಿಫೆನ್ಸ್ ಸದಸ್ಯರು ಸೇರಿ ತಾತ್ಕಾಲಿಕವಾಗಿ ಸೋರಿಕೆಯನ್ನು ಮುಚ್ಚುಗಡೆಗೊಳಿಸಿದರೂ ಬೆಳಿಗ್ಗೆ 11 ಗಂಟೆ ತನಕ ಸೋರಿಕೆಯನ್ನು ಪೂರ್ಣವಾಗಿಯೂ ತಡೆಗಟ್ಟಲು ಸಾಧ್ಯವಾಗಲಿಲ್ಲ. ಮಂಗಳೂರಿನಿಂದ ತಜ್ಞರನ್ನು ಕರೆಸಿ ಸೋರಿಕೆಯನ್ನು ಪೂರ್ಣವಾಗಿಯೂ ತಡೆಗಟ್ಟುವ ಪ್ರಯತ್ನವನ್ನು ಪೊಲೀಸರು ಮುಂದುವರಿಸಿದ್ದಾರೆ.