ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ಭಾರೀ ವಂಚನಾ ಹಗರಣದಲ್ಲಿ ಶಾಮೀಲಾಗಿರುವ ಸೊಸೈಟಿ ಕಾರ್ಯದರ್ಶಿ ರತೀಶ್ ಹಾಗೂ ಈತನ ಸಹಚರ ಕಣ್ಣೂರು ತಾಯೆಚೆವ್ವ ನಿವಾಸಿ, ಜಬ್ಬಾರ್ ತಮಿಳ್ನಾಡಿಗೆ ಪರಾರಿಯಾಗಿರುವ ಸೂಚನೆ ಲಭಿಸಿದೆ.
ಆರೋಪಿಗಳಿಬ್ಬರೂ, ವಿದೇಶಕ್ಕೆ ಹಾರುವ ಸನ್ನಾಹದಲ್ಲಿರುವುದಾಗಿ ಮಾಹಿತಿಯಿದೆ. ಬೆಂಗಳೂರು, ಹಾಸನ ಮುಂತಾದೆಡೆ ತಲೆಮರೆಸಿಕೊಂಡಿದ್ದ ಇಬ್ಬರೂ ಆರೋಪಿಗಳು, ಪೊಲೀಸರು ತಮ್ಮನ್ನು ಹುಡುಕುತ್ತಿರುವ ಬಗ್ಗೆ ಮಾಹಿತಿ ಪಡೆದು, ತಮಿಳ್ನಾಡಿಗೆ ಪರಾರಿಯಾಗಿದ್ದಾರೆನ್ನಲಾಗಿದೆ. ಈ ಮಧ್ಯೆ ರತೀಶ್ ಪತ್ನಿಗೆ ಮೊಬೈಲ್‍ನಲ್ಲಿ ವಾಟ್ಸಪ್ ಸಂದೇಶ ರವಾನಿಸಿರುವುದಾಗಿಯೂ ಮಾಹಿತಿ ಲಭಿಸಿದೆ. ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಪ್ರಕರಣಕ್ಕೆ ಸಂಬಂಧಿಸಿ ರತೀಶ್‍ನ ಸಹಚರರಾದ ನೆಲ್ಲಿಕ್ಕಾಟ್ ನಿವಾಸಿ ಅನಿಲ್ ಕುಮಾರ್, ಪರಕ್ಲಾಯಿ ನಿವಾಸಿ ಗಫೂರ್ ಹಾಗೂ ಮವ್ವಲ್ ನಿವಾಸಿ ಬಶೀರ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ನಕಲಿ ದಾಖಲೆ ತಯಾರಿಸಿ ಸೊಸೈಟಿಯಿಂದ 4,76ಕೋಟಿ ರೂ. ವಂಚಿಸಲಾಗಿದೆ.