ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷಿ ವಂದೇ ಭಾರತ್ ರೈಲುಗಳೊಂದಿಗೆ ದೇಶೀಯ ರೈಲ್ವೆ ವಲಯದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಈಗ ಅಧಿಕಾರಿಗಳು ವಂದೇ ಭಾರತ್ ಸೇವೆಗಳನ್ನು ಮಹಾನಗರಗಳಿಗೂ ವಿಸ್ತರಿಸಲು ಯೋಚಿಸುತ್ತಿದ್ದಾರೆ.
ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ ವಂದೇ ಭಾರತ್ ಮೆಟ್ರೋ ರೈಲು ಕೋಚ್‌ಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈ ವರ್ಷ ಜುಲೈನಲ್ಲಿ ವಂದೇ ಭಾರತ್ ಮೆಟ್ರೋ ರೈಲುಗಳು ಪರೀಕ್ಷಾರ್ಥ ಪಟ್ಟಾಗಳಿಗೆ ಇಳಿಯಲಿವೆ.
ಮೆಟ್ರೋಗೆ ಆರಂಭಿಕ ಹಂತದಲ್ಲಿ 50 ವಂದೇ ಭಾರತ್ ರೈಲುಗಳು ಲಭ್ಯವಾಗಲಿವೆ. ಅವುಗಳನ್ನು ಕ್ರಮೇಣ 400 ಕ್ಕೆ ಹೆಚ್ಚಿಸಲಾಗುತ್ತದೆ. ವಂದೇ ಭಾರತ್ ಮೆಟ್ರೋ 100-250 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ಅಷ್ಟೇ ಅಲ್ಲ, ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ. ಈ ರೈಲುಗಳು 12 ಕೋಚ್‌ಗಳನ್ನು ಹೊಂದಿರಲಿವೆ. ಅವುಗಳನ್ನು 16 ಕೋಚ್‌ಗಳಿಗೆ ವಿಸ್ತರಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ರೈಲುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2014 ರಿಂದ ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.