ನವದೆಹಲಿ: ರಾಜಸ್ಥಾನದ ಪಶ್ಚಿಮ ಭಾಗ ಮತ್ತು ಕೇರಳ ಹೊರತುಪಡಿಸಿ ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಸೋಮಾ ಸೇನ್ ತಿಳಿಸಿದ್ದಾರೆ.
ನವದೆಹಲಿ: ರಾಜಸ್ಥಾನದ ಪಶ್ಚಿಮ ಭಾಗ ಮತ್ತು ಕೇರಳ ಹೊರತುಪಡಿಸಿ ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಸೋಮಾ ಸೇನ್ ತಿಳಿಸಿದ್ದಾರೆ.
ಬಿಸಿಗಾಳಿ ಇರುವ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗುಡ್ಡಗಾಡು ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಿಸಿಗಾಳಿ ಎನ್ನುವುದು ಗಾಳಿಯ ಉಷ್ಣತೆಯ ಸ್ಥಿತಿಯಾಗಿದ್ದು ಅದು ಉಂಟಾದಾಗ ಮಾನವನ ದೇಹಕ್ಕೆ ಮಾರಕವಾಗುತ್ತದೆ ಎಂದು ಐಎಂಡಿ ಹೇಳಿದೆ.
ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಬಿಸಿಗಾಳಿ, ತಾಪಮಾನದ ಏರಿಕೆಯಿಂದಾಗಿ ಜನರು ತತ್ತರಿಸಿದ್ದರು.ಹಲವು ರಾಜ್ಯಗಳಲ್ಲಿ ಬರ ಜನರನ್ನು ಹೈರಾಣಗೊಳಿಸಿತ್ತು.