ಬೆಂಗಳೂರು: ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಆನೆಗಳ ಗಣತಿ ಮೇ 23 ರಿಂದ ಮೇ 25 ರವರೆಗೆ ನಡೆಯಲಿದೆ.
ಇಡೀ ಅರಣ್ಯ ಪ್ರದೇಶದಲ್ಲಿ ಆನೆಗಳ ಗಣತಿಯನ್ನು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಆದರೆ ಈ ಬಾರಿ ದಕ್ಷಿಣ ಭಾರತದ ರಾಜ್ಯಗಳ ಗಡಿ ಭಾಗಗಳಲ್ಲಿ ಮಾತ್ರ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
"ಮಾರ್ಚ್ 2024 ರಲ್ಲಿ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ನಡೆದ ಅಂತರರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಈ ರೀತಿಯ ಗಣತಿಯನ್ನು ನಿರ್ಧರಿಸಲಾಯಿತು. ಇದರ ಮೂಲಕ, ಆನೆಗಳ ಪ್ರದೇಶ, ಮಾನವ-ಪ್ರಾಣಿ ಸಂಘರ್ಷದ ಕಾರಣಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಇತ್ಯಾದಿಗಳನ್ನು ಸರಿಯಾಗಿ ಯೋಜಿಸಿ ಯೋಜನೆಯನ್ನು ಮುಂದುವರಿಸುವ ಉದ್ದೇಶ ಹೊಂದಿದ್ದೇವೆ,’’ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕ-ಕೇರಳ ಅರಣ್ಯದ ಗಡಿಯಲ್ಲಿ ರೇಡಿಯೋ ಕಾಲರ್ ಬಳಸಿ ಆನೆಯನ್ನು ಬಿಡಲಾಗಿತ್ತು. ಇದೇ ಆನೆ ವಯನಾಡಿಗೆ ಬಂದು ಒಬ್ಬ ವ್ಯಕ್ತಿಯನ್ನು ಕೊಂದ ನಂತರ ಅಂತಾರಾಜ್ಯ ಸಮ್ಮೇಳನ ನಡೆಸಲಾಯಿತು. ಮಾನವ-ಪ್ರಾಣಿ ಸಂಘರ್ಷವನ್ನು ಕಡಮೆ ಮಾಡಲು ಅಂತರ ರಾಜ್ಯ ಸಮನ್ವಯ ಸಮಿತಿಯು ಸನ್ನದು ನೀಡಿದೆ.
10 ಮಾರ್ಚ್ 2024 ರಂದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಮುಖ್ಯ ವನ್ಯಜೀವಿ ವಾರ್ಡನ್‍ಗಳು ಮತ್ತು ಅರಣ್ಯ ಇಲಾಖೆಗಳ ಮುಖ್ಯಸ್ಥರು ಅರಣ್ಯ ನೀತಿ(ಚಾರ್ಟರ್)ಗೆ ಸಹಿ ಹಾಕಿದ್ದರು. 2022-23ರಲ್ಲಿ ದಕ್ಷಿಣ ರಾಜ್ಯಗಳ ಆನೆಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಒಟ್ಟು 6,395 ಆನೆಗಳು ಪತ್ತೆಯಾಗಿವೆ.