ತಿರುವನಂತಪುರಂ: ದೇವಾಲಯಗಳಲ್ಲಿ ಪೂಜೆ-ಅರ್ಚನೆ ಹಾಗೂ ಪ್ರಸಾದವಾಗಿ ಅರಳಿ ಹೂವನ್ನು ನಿಷೇಧಿಸುವ ಯಾವುದೇ ನಿರ್ಧಾರವಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.
ವೈಜ್ಞಾನಿಕ ಪರೀಕ್ಷೆಯ ಫಲಿತಾಂಶ ಬಂದ ನಂತರ ಅರಳಿಯಲ್ಲಿನ ವಿಷಕಾರಿ ಅಂಶದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಸಾವಿಗೆ ಅರಲಿ ಹೂ ಕಾರಣ ಎಂದು ಯಾವುದೇ ಅಧಿಕೃತ ವರದಿ ಬಂದಿಲ್ಲ. ವರದಿ ಬಂದರೆ ಬಳಕೆಗೆ ನಿಷೇಧ ಹೇರುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿ ಇಂದು ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮುನ್ನ ಮಂಡಳಿ ಅಧ್ಯಕ್ಷರು ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದರು.
ಅರಳಿ ಹೂವಿನಿಂದ ಸಾವಿಗೀಡಾದ ಬಗ್ಗೆ ಸುದ್ದಿ ಹೊರಬಿದ್ದ ನಂತರ ತಿರುವಾಂಕೂರು ದೇವಸ್ವಂ ಬೋರ್ಡ್ ಈ ಬಗ್ಗೆ ಚರ್ಚಿಸಿದ್ದು, ಅರಳಿ ಬಳಸದಂತೆ ಸಾಮಾನ್ಯ ಶಿಫಾರಸ್ಸು ಮಾಡಲಾಗಿತ್ತು. ಹರಿಪಾಡ್ ನ ಯುವತಿಯೋರ್ವೆ ಎಲೆ ಮತ್ತು ಹೂವುಗಳನ್ನು ಕಚ್ಚಿದ್ದು ಸಾವಿಗೆ ಕಾರಣ ಎಂಬ ವರದಿಗಳು ಬಂದಿವೆ.
ಘಟನೆ ಏನು?
ಇತ್ತೀಚೆಗೆ ದೇವಾಲಯವೊಂದರ ಅರ್ಚನೆಯ ಹೂವನ್ನು ಬಳಸಿದ ತರುವಾಯ ಮಹಿಳೆಯೋರ್ವೆ ಸಾವಿಗೀಡಾಗಿದ್ದು, ಸಾವಿಗೆ ಅರಳಿ ಹೂ ಕಾರಣವೆಂಬ ವಿವಾದವೆದ್ದ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಅನಾದಿ ಕಾಲದಿಂದಲೂ ಅನೇಕ ದೇವಾಲಯಗಳಲ್ಲಿ ಪೂಜೆ, ಅರ್ಚನೆಗಳಿಗೆ ಬಳಸಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತಿದೆ. ಹಾಲು ಪಾಯಸ ಮುಂತಾದ ನೈವೇದ್ಯಗಳ ಜೊತೆಗೆ ಇದನ್ನು ಸೇವಿಸುವುದೂ ಕಡಿಮೆಯೇನಲ್ಲ. ಈ ಪರಿಸ್ಥಿತಿಯಲ್ಲಿ ಅರಳಿ ಹೂ ವಿರುದ್ಧ ಹಲವು ಕೇಂದ್ರಗಳಿಂದ ವ್ಯಾಪಕ ಜಾಗೃತಿ ಮೂಡಿದೆ. ಅರಳಿ ಹೂವÀಲ್ಲಿ ವಿಷ ಸತ್ವವಿದೆ ಎಂಬುದು ವಿಜ್ಞಾನ ಜಗತ್ತು ಒಪ್ಪಿಕೊಂಡಿರುವ ಸತ್ಯ.
ಯುಕೆಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದ ನರ್ಸ್ ಸೂರ್ಯ ಸುರೇಂದ್ರನ್ ಸಾವಿನಿಂದ ಇದೀಗ ದೇವಸ್ವಂ ಮಂಡಳಿಯ ಕಣ್ಣು ತೆರೆದಿದೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸೂರ್ಯ ಅವರ ಸಾವಿಗೆ ಅರಳಿ ಹೂ ಕಾರಣ ಎಂದು ತಿಳಿದು ಬಂದಿದೆ. ಅಕ್ಕಪಕ್ಕದವರನ್ನು ಬೀಳ್ಕೊಡಲು ಬಂದಾಗ ಅಂಗಳದಲ್ಲಿದ್ದ ಹೂವನ್ನು ನಿರಾತಂಕವಾಗಿ ಅಗಿದು ಕೆಲವನ್ನು ನುಂಗಿದ್ದು ಅರಿವಿಲ್ಲದೆ ನುಂಗಿದ್ದರೆಂದು ಸೂಚಿಸಲಾಗಿದೆ.