ಸಾಂಬಾ/ ಜಮ್ಮು (PTI): ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯ ಬಳಿ ಶುಕ್ರವಾರ ರಾತ್ರಿ ಪಾಕಿಸ್ತಾನದ ಡ್ರೋನ್ ಹಾರಾಟ ನಡೆಸಿದ್ದು, ಅದನ್ನು ಹೊಡೆದುರುಳಿಸಲು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಕಾರ್ಯಾಚರಣೆ ನಡೆಸುತ್ತಿರುವುದು ಬಿಎಸ್‌ಎಫ್ ಪಡೆಯ ಸಿಬ್ಬಂದಿ ಪತ್ತೆ ಹಚ್ಚಿದರು. ಅದನ್ನು ಹೊಡೆದುರುಳಿಸಲು ಎರಡು ಸುತ್ತಿನ ಗುಂಡಿನ ದಾಳಿ ನಡೆಸಲಾಯಿತು. ಆದರೆ, ಡ್ರೋನ್ ವಾಪಸ್ ಪಾಕಿಸ್ತಾನದತ್ತ ಹೊರಟಿತು. ಶನಿವಾರ ಬೆಳಿಗ್ಗೆಯೂ ರಾಮಗಢ ಸೆಕ್ಟರ್‌ನ ನಾರಾಯಣಪುರದ ಬಳಿ ಡ್ರೋನ್ ಪತ್ತೆ ಕಾರ್ಯಾಚರಣೆ ನಡೆಸಲಾಯಿತು.
ಜೊತೆಗೆ, ಈ ಪ್ರದೇಶದಲ್ಲಿ ಡ್ರೋನ್ ಯಾವುದಾದರೂ ಸ್ಫೋಟಕಗಳನ್ನು ಬಿಸಾಡಿ ಹೋಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಯುದ್ಧ ಸಾಮಗ್ರಿಗಳು ಅಥವಾ ಮಾದಕ ದ್ರವ್ಯವನ್ನು ಡ್ರೋನ್ ಬಿಸಾಡದೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.