ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ರಾಮಶೆಟ್ಟಿಗಾರ್ ಯಾನೆ ರಾಮ ಮೇಸ್ತ್ರಿ(62)ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಲ್ಲು ಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಇವರು ಮೇ 3ರಂದು ಮನೆಯಿಂದ ಹೊರಟವರು ವಾಪಸಾಗಿಲ್ಲ. ಮೊಬೈಲ್ ಮನೆಯಲ್ಲೇ ಬಿಟ್ಟಿದ್ದು, ಸಂಬಂಧಿಕರ ಮನೆಗಳಲ್ಲೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲೆ ಂದು ಪೊಲೀಸರಿಗೆ ನೀಡಿದ ದಊರಿನಲ್ಲಿ ತಿಳಿಸಲಾಗಿದೆ.