ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಸ್ಕೂಲ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯ 1990-91ನೇ ಬಾಚ್‍ನ ಸೌಹಾರ್ದ ಕೂಟ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮಾ ಬಳ್ಳಪದವು ದೀಪ ಬೆಳಗಿಸಿ ಉದ್ಘಾಇಸಿದರು. ಸಭೆಯಲ್ಲಿ ಅಶೋಕ ರೈ ನಾರಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಅಧ್ಯಾಪಕ ಸಿ.ಎಚ್.ಕೃಷ್ಣ ಮಾಸ್ತರ್, ಅಚ್ಚುತ ಮಾಸ್ತರ್, ಗೋವರ್ಧನ ಮಾಸ್ತರ್, ನಿವೃತ್ತ ಶಿಕ್ಷಕಿಯರಾದ ಲೀಲಾವತಿ, ಯಶೋಧ, ಗೀತಾಮಾಲಿನಿ, ವಸಂತಿ ಟೀಚರ್ ಅಗಲ್ಪಾಡಿ ಮತ್ತು ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಕೃಷ್ಣ ಮಣಿಯಾಣಿ ಕೊರತ್ತಿಂಗಲ್ಲು ಇವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಪ್ರಿನ್ಸಿಪಾಲ್ ಸತೀಶ್ ವೈ, ಮುಖ್ಯಶಿಕ್ಷಕ ಗಿರೀಶ್ ನಾಂದ್ರೋಡು, ಅಧ್ಯಾಪಕರಾದ ಹರಿನಾರಾಯಣ ಶಿರಂತಡ್ಕ, ಪಿಟಿಎ ಅಧ್ಯಕ್ಷ ರಮೇಶ್‍ಕೃಷ್ಣ ಪದ್ಮಾರ್, ಕೋಶಾಧಿಕಾರಿ ಸದಾಶಿವ ಮೈಲುತೊಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಡಾ. ರಾಜೇಂದ್ರ ಪಿಲಾಂಕಟ್ಟೆ, ಇಬ್ರಾಹೀಂ ನಾರಂಪಾಡಿ ಶುಭಾಶಂಸನೆಗೈದರು. ಆರಂಭದಲ್ಲಿ ಭಾಗ್ಯಲಕ್ಷ್ಮೀ ಮತ್ತು ಅರುಣ ಉಡುಪ ಪ್ರಾರ್ಥನೆ ಹಾಡಿದರು. ಬಾಲರಾಜ್ ಬೆದ್ರಡಿ ಸ್ವಾಗತಿಸಿ, ಉದಯ ಶಂಕರ್ ವಂದಿಸಿದರು. ಉದಯ ಕುಮಾರ್ ಕಲ್ಲಕಟ್ಟ ನಿರೂಪಿಸಿದರು. ಅಪರಾಹ್ನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಈ ಬ್ಯಾಚ್‍ನ ಅತ್ಯಧಿಕ ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು.