ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ನ್ಯಾಯಾಧೀಶೆಯಾಗಿ ಆಂಧ್ರ ಮೂಲದ ಜಯಾ ಬಡಿಗ ನೇಮಕಗೊಂಡಿದ್ದಾರೆ.
ಇದರೊಂದಿಗೆ ಅಮೆರಿಕದಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡ ಪ್ರಥಮ ತೆಲುಗು ಮಹಿಳೆಯಾಗಿ ಜಯಾ ಗುರುತಿಸಿಕೊಂಡಿದ್ದಾರೆ.
ಆಂಧ್ರದ ಮಚಲೀಪಟ್ಟಣಂ ಕ್ಷೇತ್ರದ ಮಾಜಿ ಸಂಸದ ಬಡಿಗ ರಾಮಕೃಷ್ಣ ಅವರ ಪುತ್ರಿಯಾಗಿರುವ ಜಯಾ, ನ್ಯಾಯಾಧೀಶೆಯಾಗಿ ನೇಮಕಗೊಂಡ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದಾಗ ಮಾತೃಭಾಷೆ ತೆಲುಗಿನಲ್ಲಿ ಸ್ವಾಗತಿಸಿ ಸಂಸ್ಕೃತದ ಅಸತೋಮ ಸದ್ಗಮಯ ಪ್ರಾರ್ಥನೆಯೊಂದಿಗೆ ಮಾತು ಮುಗಿಸಿದರು.