ಕೋಝಿಕ್ಕೋಡ್: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಆರ್ ಟಿಒಗೆ ಕೋಝಿಕ್ಕೋಡ್ ವಿಜಿಲೆನ್ಸ್ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ಹಾಗೂ 37 ಲಕ್ಷ ರೂ.ದಂಡ ವಿಧಿಸಿದೆ.
ಕೋಝಿಕ್ಕೋಡ್ ಪ್ರಾದೇಶಿಕ ಸಾರಿಗೆ ಇಲಾಖೆಯ ಮಾಜಿ ಅಧಿಕಾರಿ ಕೆ. ಹರೀಂದ್ರ ಶಿಕ್ಷೆಗೊಳಗಾದರು. 8.87 ಎಕರೆ ಜಮೀನು ಹಾಗೂ ಎರಡು ಅಂತಸ್ತಿನ ಮನೆಯನ್ನು ಅಕ್ರಮವಾಗಿ ಸಂಪಾದಿಸಿದ್ದರು. ಇದನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.
1989ರಿಂದ 2005ರ ಅವಧಿಯಲ್ಲಿ ಆರ್ಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಅಕ್ರಮವಾಗಿ 38 ಲಕ್ಷ ರೂ.ಸಂಪಾದಿಸಿದ್ದರು. ಕೋಝಿಕ್ಕೋಡ್ ವಿಜಿಲೆನ್ಸ್ ಸ್ಪೆಷಲ್ ಸೆಲ್ ತನಿಖೆ ನಡೆಸಿದ ಪ್ರಕರಣದಲ್ಲಿ ಈ ಆದೇಶ ಬಂದಿದೆ.