ಬ್ಯಾಟರಿ ಡ್ರೈನ್ ಸಮಸ್ಯೆಯಿಂದ ಬೇಸತ್ತು ಕೆಲವರು ಫೋನ್ ಅನ್ನೇ ಬದಲಾವಣೆ ಮಾಡಲು ಹೊರಡುತ್ತಾರೆ. ಆದರೆ, ಕೆಲವು ಟ್ರಿಕ್ ಮೂಲಕ ನಿಮ್ಮ ಫೋನ್ ಬ್ಯಾಟರಿಯ ಡ್ರೈನ್ ಸಮಸ್ಯೆಯನ್ನು ಸರಿಪಡಿಸಬಹುದು. ಆದರೆ ಬ್ಯಾಟರಿ ಖಾಲಿಯಾಗಲು ಹಲವು ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯೇ?.
ಸ್ಮಾರ್ಟ್‌ಫೋನ್ (Smartphone) ಇಂದು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ಇದು ಕೇವಲ ಕರೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸ್ಮಾರ್ಟ್‌ಫೋನ್ ಮೂಲಕವೇ ಇಂದು ಅನೇಕ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಆಹಾರವನ್ನು ಆರ್ಡರ್ ಮಾಡುವುದರಿಂದ ಹಿಡಿದು ಬ್ಯಾಂಕಿಂಗ್ ಮಾಡುವವರೆಗೆ ಅನೇಕ ಕೆಲಸಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಳಸಲಾಗುತ್ತಿದೆ. ಆದರೆ ಈ ಸ್ಮಾರ್ಟ್‌ಫೋನ್ ಬಳಸುವಾಗ ಅನೇಕರಿಗೆ ದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ. ಈಗ ಫೋನ್ ಬ್ಯಾಟರಿ ಡ್ರೈನ್ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ.
ಬ್ಯಾಟರಿ ಡ್ರೈನ್ ಸಮಸ್ಯೆಯಿಂದ ಬೇಸತ್ತು ಕೆಲವರು ಫೋನ್ ಅನ್ನೇ ಬದಲಾವಣೆ ಮಾಡಲು ಹೊರಡುತ್ತಾರೆ. ಆದರೆ, ಕೆಲವು ಟ್ರಿಕ್ ಮೂಲಕ ನಿಮ್ಮ ಫೋನ್ ಬ್ಯಾಟರಿಯ ಡ್ರೈನ್ ಸಮಸ್ಯೆಯನ್ನು ಸರಿಪಡಿಸಬಹುದು. ಆದರೆ ಬ್ಯಾಟರಿ ಖಾಲಿಯಾಗಲು ಹಲವು ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯೇ?.
ಸ್ಕ್ರೀನ್ ಬ್ರೈಟ್ ನೆಸ್: ಸಾಮಾನ್ಯವಾಗಿ ನಾವು ಈ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ಫೋನ್‌ನ ಹೈ ಸ್ಕ್ರೀನ್ ಬ್ರೈಟ್ ನೆಸ್ ಬ್ಯಾಟರಿಯನ್ನು ಬೇಗ ಖಾಲಿ ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ನೀವು ಬ್ಯಾಟರಿಯನ್ನು ಉಳಿಸಲು ನಿಮ್ಮ ಫೋನ್‌ನ ಬ್ರೈಟ್ ನೆಸ್ ಅನ್ನು ಕಡಿಮೆ ಮಾಡಬಹುದು.
ಬ್ಯಾಕ್ಗ್ರೌಂಡ್ ಅಪ್ಲಿಕೇಶನ್‌ಗಳು: ನಾವು ಈ ಬಗ್ಗೆ ಕೂಡ ಗಮನ ಹರಿಸುವುದಿಲ್ಲ. ಇಂದು ಅಪ್ಲಿಕೇಶನ್ ತೆರೆದು ಬಳಿಕ ನೇರವಾಗಿ ಹೋಪ್ ಪೇಜ್ಗೆ ಹೋಗುತ್ತೇವೆ. ಈ ಕಾರಣದಿಂದಾಗಿ, ಅನೇಕ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಬ್ಯಾಟರಿಯನ್ನು ತಿನ್ನುತ್ತವೆ. ನೀವು ಅವುಗಳನ್ನು ಬಳಸದಿದ್ದರೂ ಸಹ ಈ ಅಪ್ಲಿಕೇಶನ್‌ಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಆಗ ಬ್ಯಾಟರಿ ಖಾಲಿ ಆಗುತ್ತದೆ.
ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು, ಮೇಲ್ ಸಿಂಕ್ ಆನ್, ಲೊಕೇಷನ್ ಆನ್ ಮತ್ತು ಬ್ಯಾಕ್ಗ್ರೌಂಡ್ನಲ್ಲಿರುವ ಗೇಮಿಂಗ್ ಅಪ್ಲಿಕೇಶನ್‌ಗಳು ಬಹಳಷ್ಟು ಬ್ಯಾಟರಿಯನ್ನು ತಿನ್ನುತ್ತವೆ. ಹಾಗಾಗಿ ಮೊಬೈಲ್ನಲ್ಲಿ ಅಗತ್ಯ ಆಯಪ್ಗಳನ್ನು ಮಾತ್ರ ಇಟ್ಟುಕೊಳ್ಳಬೇಕು.
ಸಾಮಾನ್ಯವಾಗಿ ಬ್ಯಾಟರಿಯು ಲೊಕೇಷನ್ ಆನ್ ಮಾಡಿದರೂ ಸಹ ತ್ವರಿತವಾಗಿ ಬರಿದಾಗುತ್ತದೆ. ಜಿಪಿಎಸ್, ವೆದರ್ ಅಪ್ಲಿಕೇಶನ್‌ಗಳು, ಫಿಟ್‌ನೆಸ್ ಟ್ರ್ಯಾಕರ್‌ಗಳಂತಹ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡುತ್ತದೆ.
ಬ್ಲೂಟೂತ್, ವೈ-ಫೈ ಮತ್ತು ಸೆಲ್ಯುಲಾರ್ ಡೇಟಾವನ್ನು ಆನ್‌ನಲ್ಲಿ ಇರಿಸುವುದು: ನೀವು ಬ್ಲೂಟೂತ್, ವೈ-ಫೈ ಮತ್ತು ಸೆಲ್ಯುಲಾರ್ ಡೇಟಾದಂತಹ ಸೇವೆಗಳನ್ನು ಸದಾ ಆನ್‌ನಲ್ಲಿ ಇರಿಸಿದರೂ ಸಹ, ನಿಮ್ಮ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ.
ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು?
ಬ್ಯಾಟರಿ ಬೇಗನೆ ಖಾಲಿಯಾಗುತ್ತಿದ್ದರೆ, ಆಂಡ್ರಾಯ್ಡ್ ಫೋನ್ನಲ್ಲಿ ನೀವು ಸೆಟ್ಟಿಂಗ್‌ಗಳು > ಬ್ಯಾಟರಿ > ಬ್ಯಾಟರಿ ಬಳಕೆಗೆ ಹೋಗಬೇಕು. ನೀವು iOS ಬಳಕೆದಾರರಾಗಿದ್ದರೆ ಸೆಟ್ಟಿಂಗ್‌ಗಳು > ಬ್ಯಾಟರಿ ಆಯ್ಕೆಗೆ ಹೋಗಿ. ಬ್ಯಾಟರಿ ಸೇವರ್ ಮೋಡ್ ಅನ್ನು ಆನ್ ಮಾಡಿ. ಇದು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸೇವರ್ ಅಥವಾ ಪವರ್ ಸೇವಿಂಗ್ ಮೋಡ್‌ನೊಂದಿಗೆ ಬರುತ್ತದೆ. ಇದರಿಂದ ನಿಮ್ಮ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು.
ಬ್ಯಾಟರಿ ಮಟ್ಟವನ್ನು 20 ಮತ್ತು 80% ನಡುವೆ ಇರಿಸಿ
ನಿಮ್ಮ ಫೋನ್‌ನ ಬ್ಯಾಟರಿ ಮಟ್ಟವನ್ನು 20-80% ನಡುವೆ ಇರಿಸುವುದರಿಂದ ಬ್ಯಾಟರಿ ಆರೋಗ್ಯಕರವಾಗಿರುತ್ತದೆ. ನಿಮ್ಮ ಬ್ಯಾಟರಿ 20% ತಲುಪಿದಾಗ ಚಾರ್ಜ್ಗೆ ಹಾಕಿ. ಬ್ಯಾಟರಿಗೆ ಹಾನಿಯಾಗುವುದನ್ನು ತಪ್ಪಿಸಲು, ಅದನ್ನು 80% ವರೆಗೆ ಮಾತ್ರ ಚಾರ್ಜ್ ಮಾಡಿ. ರಾತ್ರಿ ಪೂರ್ತಿ ಮೊಬೈಲ್ ಅನ್ನು ಚಾರ್ಜ್ಗೆ ಹಾಕುವುದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ.