HEALTH TIPS

ಅರಣ್ಯ ಸಂರಕ್ಷಣೆಯಲ್ಲಿ ಭಾರೀ ಪ್ರಗತಿ ಸಾಧಿಸಿದ್ದೇವೆ: ವಿಶ್ವಸಂಸ್ಥೆಗೆ ಭಾರತ

             ವದೆಹಲಿ: ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆಯಲ್ಲಿ ನಾವು ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.

             ಮೇ 6ರಿಂದ 10ರವರೆಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆಯೋಜನೆಗೊಂಡಿದ್ದ ವಿಶ್ವಸಂಸ್ಥೆಯ ಅರಣ್ಯ ವೇದಿಕೆಯ (UNFF) 19ನೇ ಮಾಹಾಧಿವೇಶನದಲ್ಲಿ ಭಾರತ ಈ ವರದಿ ಸಲ್ಲಿಸಿದೆ.

               ಕಳೆದ 15 ವರ್ಷದಲ್ಲಿ ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆಯಲ್ಲಿ ಭಾರತ ದೊಡ್ಡ ಪ್ರಗತಿ ಸಾಧಿಸಿದೆ. ಈ ಕಾರ್ಯ ಇನ್ನು ದೊಡ್ಡ ಮಟ್ಟದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದೆ.

                 ಜಾಗತಿಕವಾಗಿ ಅರಣ್ಯ ಸಂರಕ್ಷಣೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ವಿವರಿಸಿದೆ.

ಪ್ರಾಜೆಕ್ಟ್ ಟೈಗರ್‌ ಯೋಜನೆಗೆ 50 ವರ್ಷ ಹಾಗೂ ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಗೆ 30 ವರ್ಷ ಆಗಿದ್ದು ಈ ಎರಡೂ ಮಹತ್ವದ ಯೋಜನೆಗಳು ಭಾರತದಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ಭಾರಿ ಯಶಸ್ಸು ಕಂಡಿವೆ ಎಂದು ಹೇಳಿದೆ.

                   ಅರಣ್ಯ ರಕ್ಷಣೆಯನ್ನು ಆದಷ್ಟು ವೇಗವಾಗಿ ಮಾಡುವುದು ಹಾಗೂ ಭೂ ಸವಕಳಿಯನ್ನು ತಡೆಗಟ್ಟುವ ನಿರ್ಣಯದೊಂದಿಗೆ ಈ ಸಾರಿಯ UNFF ಮಹಾಧೀವೇಶನ ಕೊನೆಗೊಂಡಿತು.

UNFF 18 ನೇ ಮಹಾಧಿವೇಶನ ಕಳೆದ ಭಾರಿ ಭಾರತದ ಡೆಹರಾಡೂನ್‌ನಲ್ಲಿ ನಡೆದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries