ಕಾಸರಗೋಡು: ಸೇವಾ ಭಾರತಿ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ನಿರ್ಮಿಸಲಾದ ಮನೆಯ ಕೀಲಿಕೈ ಹಸ್ತಾಂತರ ಸಮಾರಂಭ ನೆರವೇರಿತು. ಕಾಸರಗೋಡು ಕೂಡ್ಲು ನಿವಾಸಿ, ಹರೀಶ್ಚಂದ್ರ ಆಚಾರ್ಯ ಅವರಿಗಾಗಿ ಮನೆ ನಿರ್ಮಿಸಲಾಗಿದ್ದು, ಮಂಗಳವಾರ ನಡೆದ ಸಮಾರಂಭದಲ್ಲಿ ಕೀಲಿಕೈ ಹಸ್ತಾಂತರ, ಗೃಹಪ್ರವೇಶ ಕಾರ್ಯಕ್ರಮ ನೆರವೇರಿತು.
ಶ್ರೀ ವೇದ ವೇದಾಂತ ಚೈತನ್ಯ ಸ್ವಾಮೀಜಿ ಅಮೃತಾನಂದ ಮಠ ವಿವೇಕಾನಂದ ನಗರ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಣ್ಣೂರು ವಿಭಾಗ್ ಸಹಕಾರ್ಯವಾಹ ಲೋಕೇಶ್ ಜೋಡುಕಲ್ಲು, ಜಿಲ್ಲಾ ಕಾರ್ಯವಾಹ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ ಭೌದಿಕ್ ಪ್ರಮುಖ್ ಅನಂತ ಪದ್ಮನಾಭ, ಜಿಲ್ಲಾ ಪ್ರಚಾರಕ ಶ್ರೀಕಂಠನ್, ತಾಲೂಕ್ ಕಾರ್ಯವಾಹ ಅಕ್ಷತ್ , ಮದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಸೇವಾ ಭಾರತಿ ಸಂಘಟನಾ ಕಾರ್ಯದಶಿ ಉಣ್ಣಿ ಕೃಷ್ಣನ್, ಬಾ.ಜ.ಪ. ಜಿಲ್ಲಾ ಸಮಿತಿ ಅಧ್ಯ್ಷ ರವೀಶ್ ತಂತ್ರಿ ಕುಂಟಾರ್ , ಬಿ.ಎಂ.ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಸಹಕಾರ ಭಾರತಿ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಪಾರಕಟ್ಟ, ಆರೆಸ್ಸೆಸ್ ಹಾಗೂ ವಿವಿಧ ಕ್ಷೇತ್ರಗಳ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.