ತಿರುವನಂತಪುರಂ: ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದಲ್ಲಿರುವ ದೇವಾಲಯಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದದಿಂದ ಅರಳಿ ಹೂವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಕುರಿತು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ನಿರ್ಧಾರ ಇಂದಿನಿಂದಲೇ ಜಾರಿಗೆ ಬರಲಿದೆ.
ಅರಳಿ ಹೂ ಬಳಕೆಯಿಂದ ಆರೋಗ್ಯ ಸಮಸ್ಯೆ ಎದುರಾಗುವ ಆತಂಕ ಎದುರಾಗಿದ್ದು, ರಾಸಾಯನಿಕ ಪರೀಕ್ಷೆಯ ಫಲಿತಾಂಶ ಬರುವವರೆಗೆ ಅರಳಿ ಹೂ ಬಳಕೆ ಮಧ್ಯಂತರ ನಿರ್ಧಾರವಾಗಿದೆ ಎಂದು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.
ಭಕ್ತರಿಗೆ ನೀಡುವ ನಿವೇದ್ಯ ಸಮರ್ಪಣೆ ಮತ್ತು ಅರ್ಚನಾ ಪ್ರಸಾದದಲ್ಲಿ ಅರಳಿ ಹೂ ಬಳಕೆ ತಪ್ಪಿಸಲಾಗಿದೆ. ದೇವಾಲಯದ ನೈವೇದ್ಯಕ್ಕೆ ತುಳಸಿ, ದಾಸವಾಳ, ಮಲ್ಲಿಗೆ, ಗುಲಾಬಿ ಸಹಿತ ಇತರ ಹೂವುಗಳನ್ನು ಬಳಸಬಹುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಅರಳಿ ಹೂವನ್ನು ಪೂಜೆಗೆ ಬಳಸುವುದನ್ನು ನಿಷೇಧಿಸಿಲ್ಲ. ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡುವುದನ್ನು ಮಾತ್ರ ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಪಿಎಸ್ ಪ್ರಶಾಂತ್ ತಿಳಿಸಿದ್ದಾರೆ. ಅರಳಿ ಹೂವನ್ನು ಪುಷ್ಪಾಭಿಷೇಕ ಮತ್ತು ನಿರಾಳಕ್ಕೆ ಬಳಸುವುದನ್ನು ಆ ಸಮಯದಲ್ಲಿ ನಿಷೇಧಿಸಲಾಗಿಲ್ಲ. ಆರೋಗ್ಯ ಇಲಾಖೆ ಸೂಚನೆ ನೀಡಿದರೆ ಅನುಷ್ಠಾನಗೊಳಿಸಲಾಗುವುದು. ಒಂದು ವೇಳೆ ವೈಜ್ಞಾನಿಕ ಪರೀಕ್ಷೆಯಿಂದ ವಿಷಕಾರಿ ಎಂದು ಕಂಡುಬಂದರೆ ದೇವಸ್ಥಾನದಲ್ಲಿ ಯಾವುದಕ್ಕೂ ಬಳಸುವುದಿಲ್ಲ ಎಂದು ಮಾಹಿತಿ ನೀಡಿದರು.