ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ವಿರುದ್ಧ ಟೆಸ್ಲಾ ಮತ್ತು ಸ್ಪೇಸ್‍ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಆರೋಪ ಎತ್ತಿದ್ದಾರೆ. ವಾಟ್ಸ್ ಆಪ್ ಪ್ರತಿ ರಾತ್ರಿ ಬಳಕೆದಾರರ ಡೇಟಾವನ್ನು ಹ್ಯಾಕ್ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ.
ಈ ಡೇಟಾವನ್ನು ವಿಶ್ಲೇಷಿಸುವ ಮತ್ತು ಉತ್ಪನ್ನಗಳಿಗೆ ಗ್ರಾಹಕರನ್ನು ಜಾಹೀರಾತು ಮತ್ತು ನಿರ್ಮಾಣಕ್ಕಾಗಿ ಬಳಸುವ ಕುರಿತು ಎಕ್ಸ್ ಗ್ರಾಹಕರ ಪೋಸ್ಟ್‍ಗೆ ಪ್ರತಿಕ್ರಿಯೆಯಾಗಿ ಮಸ್ಕ್ ಇದನ್ನು ಹೇಳಿದರು.
ವಾಟ್ಸಾಪ್ ಸುರಕ್ಷಿತ ಎಂದು ಕೆಲವರು ಭಾವಿಸುತ್ತಾರೆ. ಆದರೆ ಪ್ರತಿ ರಾತ್ರಿ ವಾಟ್ಸಾಪ್ ನಿಮ್ಮ ಡೇಟಾವನ್ನು ಹ್ಯಾಕ್ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಮಸ್ಕ್‍ನ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‍ಬರ್ಗ್, ಮಸ್ಕ್‍ನ ಆರೋಪಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಇದೇ ವೇಳೆ ಕಂಪ್ಯೂಟರ್ ಪ್ರೊಗ್ರಾಮರ್ ಹಾಗೂ ವಿಡಿಯೋ ಗೇಮ್ ಡೆವಲಪರ್ ಆಗಿರುವ ಜಾನ್ ಕಾಮ್ರ್ಯಾಕ್, ವಾಟ್ಸಾಪ್ ಡೇಟಾ ವರ್ಗಾವಣೆಯಾಗುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇದೆಯೇ ಎಂದು ಕೇಳಿದ್ದಾರೆ. ಮೆಟಾಡೇಟಾ ಮತ್ತು ಬಳಕೆಯ ಮಾದರಿಗಳನ್ನು ಸಂಗ್ರಹಿಸಬಹುದು. ಆದರೆ ಸಂದೇಶಗಳು ಸುರಕ್ಷಿತವಾಗಿವೆ ಎಂದು ನಂಬುವುದಾಗಿ ಜಾನ್ ಹೇಳಿದರು.
ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‍ಬರ್ಗ್ ಇಬ್ಬರು ಕಂಪನಿಯ ಸಿಇಒಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿ ಜಗಳವಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ವಾಟ್ಸಾಪ್ ವಿರುದ್ಧ ಮಸ್ಕ್ ಮಾಡಿರುವ ಆರೋಪಕ್ಕೆ ಜುಕರ್‍ಬರ್ಗ್ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡೋಣ.