ತಿರುವನಂತಪುರಂ: ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ರೈಲುಗಳು ವಿಳಂಬವಾಗಿ ಸಂಚರಿಸಿವೆ. ತಿರುವನಂತಪುರಂ ಕಡೆಗೆ ಹೋಗುವ 10ಕ್ಕೂ ಹೆಚ್ಚು ರೈಲುಗಳು ತಡವಾಗಿವೆ.
ಚೆನ್ನೈ-ತಿರುವನಂತಪುರಂ ಸೂಪರ್ ಫಾಸ್ಟ್ 1 ಗಂಟೆ 45 ನಿಮಿಷ ತಡವಾಗಿದೆ. ಅಂತ್ಯೋದಯ ಎಕ್ಸ್‍ಪ್ರೆಸ್ 50 ನಿಮಿಷಗಳು, ಮಲಬಾರ್ ಎಕ್ಸ್‍ಪ್ರೆಸ್ 1 ಗಂಟೆ 45 ನಿಮಿಷಗಳು ಮತ್ತು ತಿರುಪತಿ-ಕೊಲ್ಲಂ 20 ನಿಮಿಷಗಳು ವಿಳಂಬವಾಗಿ ಸಂಚರಿಸಿತು. ಮೈಸೂರು - ಕೊಚುವೇಲಿ ಹಮ್ಸಫರ್ ಎಕ್ಸ್‍ಪ್ರೆಸ್ 1 ಗಂಟೆ 30 ನಿಮಿಷಗಳು ಮತ್ತು ಜಯಂತಿ ಮತ್ತು ಎಲ್‍ಟಿಟಿ ಕೊಚುವೇಲಿ ರೈಲುಗಳು 6 ಗಂಟೆಗಳ ಕಾಲ ವಿಳಂಬವಾಗಿದೆ. ಐಲ್ಯಾಂಡ್ ಎಕ್ಸ್‍ಪ್ರೆಸ್ ಒಂದು ಗಂಟೆ ಮತ್ತು ಇಂಟರ್‍ಸಿಟಿ 25 ನಿಮಿಷಗಳಷ್ಟು ವಿಳಂಬವಾಗಿ ಸಂಚರಿಸಿದವು.