ನವದೆಹಲಿ (PTI): ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ ಅವರಿಗೆ 2006ರ ನಕಲಿ ಎನ್‌ಕೌಂಟರ್ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಈ ನಕಲಿ ಎನ್‌ಕೌಂಟರ್‌ನಲ್ಲಿ ಪಾತಕಿ ರಾಮನಾರಾಯಣ್ ಗುಪ್ತ ಅಲಿಯಾಸ್ ಲಖ್ಖನ್ ಭೈಯಾ ಹತ್ಯೆ ಆಗಿತ್ತು.

ಶರ್ಮ ಅವರಿಗೆ ಜಾಮೀನು ಮಂಜೂರು ಮಾಡುವುದಕ್ಕೆ ರಾಜ್ಯ ಸರ್ಕಾರದ ಆಕ್ಷೇಪ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ನ್ಯಾಯಮೂರ್ತಿ ರಿಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠಕ್ಕೆ ತಿಳಿಸಿದರು.
ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ಶರ್ಮ ಅವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿದೆ. ಶರ್ಮ ಅವರು ಪೊಲೀಸ್ ಅಧಿಕಾರಿಗಳಾದ ದಯಾ ನಾಯಕ್, ವಿಜಯ್ ಸಾಲಸ್ಕರ್, ರವೀಂದ್ರ ಆಂಗ್ರೆ ಅವರಂಥವರ ಜೊತೆಗೂಡಿ ಮುಂಬೈನ ಭೂಗತ ಲೋಕವನ್ನು ಎದುರಿಸಿದ್ದರು. ನಕಲಿ ಎನ್ನಲಾದ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ರಾಮನಾರಾಯಣ್ ಗುಪ್ತ, ಪಾತಕಿ ಚೋಟಾ ರಾಜನ್‌ನ ಸಹಚರ ಎಂಬ ಆರೋಪ ಇದೆ.
2006ರ ನವೆಂಬರ್ 11ರಂದು ಪೊಲೀಸರು ರಾಮನಾರಾಯಣ್ ಗುಪ್ತ ಅವರನ್ನು ನವಿ ಮುಂಬೈನ ವಾಶಿಯಲ್ಲಿ ವಶಕ್ಕೆ ಪಡೆದಿದ್ದರು. ನಂತರ ಅದೇ ದಿನ ಸಂಜೆ ಅವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು.