ತಿರುವನಂತಪುರಂ: ಪೂಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಿದ್ಧಾರ್ಥ್ ಸಾವಿನ ಸಿಬಿಐ ತನಿಖೆ ವಿಳಂಬಕ್ಕೆ ಕಾರಣರಾಗಿ ಅಮಾನತುಗೊಂಡಿದ್ದ ಅಧಿಕಾರಿಗಳನ್ನು ಸರ್ಕಾರ ವಾಪಸ್ ಸೇವೆಗೆ ಸೇರ್ಪಡೆಗೊಳಿಸಿದೆ.
ಉಪ ಕಾರ್ಯದರ್ಶಿ ಪ್ರಶಾಂತ, ಸೆಕ್ಷನ್ ಆಫೀಸರ್ ಬಿಂದು ಮತ್ತು ಗೃಹ ಇಲಾಖೆಯ ಎಂ ವಿಭಾಗದ ಕಛೇರಿ ಸಹಾಯಕ ಅಂಜು ಅವರಿಗೆ ಕೆಲಸಕ್ಕೆ ಪ್ರವೇಶ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಒಪ್ಪಿಸದ ಕಾರಣ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.
ಈ ನಡುವೆ ಪ್ರಕರಣದ ಆರೋಪಿ ಕಾಲೇಜು ಯೂನಿಯನ್ ಅಧ್ಯಕ್ಷ ಅರುಣ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿದ್ಧಾರ್ಥ್ ಸಾವಿಗೆ ತಾನು ಕಾರಣರಲ್ಲ ಎಂದು ಅರುಣ್ ಜಾಮೀನು ಅರ್ಜಿಯಲ್ಲಿ ಸೂಚಿಸಿದ್ದು, ಆ ಸಮಯದಲ್ಲಿ ಕ್ರೀಡಾಕೂಟ ಮತ್ತು ಮುಖ್ಯಮಂತ್ರಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ನಿರತರಾಗಿದ್ದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳ ಸ್ವಾಭಾವಿಕ ಜಾಮೀನು ತಡೆಯಲು ಸಿಬಿಐ ಮೊದಲ ಹಂತದ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ. ಚಾರ್ಜ್ ಶೀಟ್ ನಲ್ಲಿ 20 ಆರೋಪಿಗಳು ಸೇರಿದ್ದಾರೆ.
ಫೆಬ್ರವರಿ 18 ರಂದು, ಸಿದ್ಧಾರ್ಥ್ ವಿಶ್ವವಿದ್ಯಾಲಯದ ಹಾಸ್ಟೆಲ್‍ನ ವಾಶ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದರು.