ಮಧೂರು: ನೀರಾಳ ಶ್ರೀಪಿಲಡ್ಕತ್ತಾಯ ದೈವಸ್ಥಾನದಲ್ಲಿ ಪ್ರಥಮ ವಾರ್ಷಿಕೋತ್ಸವ, ಧರ್ಮನೇಮ ಶುಕ್ರವಾರ ಜರಗಿತು. ಬ್ರಹ್ಮಶ್ರೀ ವೇದಮೂರ್ತಿ ಉಳಿಯತ್ತಾಯ ವಿಷ್ಣು ಅಸ್ರ ಅವರ ನೇತೃತ್ಬದಲ್ಲಿ ಗಣಪತಿ ಹೋಮ,ತಂಬಿಲ,ನಾಗದೇವರಿಗೆ ಪಂಚಾಮೃತ,ಕ್ಷೀರಾಭಿಷೇಕ,ಪೀಲಡ್ಕತ್ತಾಯ ಧರ್ಮನೇಮ ಜರಗಿತು. ದೈವಸ್ಥಾನದ ಪ್ರಮುಖರಾದ ಶ್ರೀಕೃಷ್ಣ ಹೊಳ್ಳ ನೀರಾಳ, ಸುಬ್ರಾಯ ಹೊಳ್ಳ ನೀರಾಳ, ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು, ನರಸಿಂಹ ಹೊಳ್ಳ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.