ಕೊಚ್ಚಿ: ಹಲವು ಜಲಮೂಲಗಳು ಬತ್ತಿ ಹೋಗಿರುವುದರಿಂದ ಪಕ್ಷಿಗಳು ಬದುಕಲು ಹರಸಾಹಸ ಪಡುತ್ತಿವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ನಗರ ಪ್ರದೇಶದ ಪಕ್ಷಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.
ಪಶು-ಪಕ್ಷಿಗಳಿಗೆ ಕರುಣೆ ತೋರುವುದರ ಮಹತ್ವವನ್ನು ಸ್ಪಷ್ಟಪಡಿಸುತ್ತಾ, ಲುಲುವಿನಲ್ಲಿ ಮಣ್ಣಿನ ಮಡಕೆಗಳ ಮೂಲಕ ಪಕ್ಷಿಗಳ ಮೇಲೆ ಕಾರುಣ್ಯ ತೋರುವ ಯೋಜನೆಗೆ ಚಾಲನೆ ನೀಡಲಾಗಿದೆ. ನಗರದಲ್ಲಿ ಹಲವು ಪಕ್ಷಿಗಳಿಗೆ ಬದುಕುಳಿಯಲು ಲುಲುವಿನ ಕಾರುಣ್ಯ ಯೋಜನೆಯಿಂದ ನೆಮ್ಮದಿ ಸಿಕ್ಕಿದೆ. ಎಡಪಲ್ಲಿ ಲುಲು ಮಾಲ್‍ನ ಟೆರೇಸ್, ಕಿಟಕಿಗಳು ಮತ್ತು ಸುತ್ತಮುತ್ತಲಿನ ಕೇಂದ್ರಗಳಲ್ಲಿ ಅನೇಕ ಮಣ್ಣಿನ ಪಾತ್ರೆಗಳನ್ನು ವ್ಯವಸ್ಥೆಗೊಳಿಸುವ ಮೂಲಕ ಜೀವಜಲ ದೊರಕಿಸಿಕೊಡುವ ಯತ್ನ ಆರಂಭಿಸಲಾಗಿದೆ.
ಕೊಚ್ಚಿ ಲುಲು ಮಾಲ್‍ನ ಈ ಅನುಕರಣೀಯ ಚಟುವಟಿಕೆಯು ಪರಿಸರ ಜಾಗೃತಿಯ ಸಾರಥಿಯಾಗಿ ಗುರುತಿಸಿಕೊಂಡಿರುವ, ಪರಿಸರ ತಜ್ಞ ನಾರಾಯಣನ್ ಅವರ ನೇತೃತ್ವದಲ್ಲಿ ನಡೆಯಿತು. ನಗರದ ಬೇಗೆಯಲ್ಲಿ ಉರಿಯುತ್ತಿರುವ ಹಲವು ಪಕ್ಷಿಗಳಿಗೆ ಕರುಣೆಯ ಜೀವಂತ ಸ್ಪರ್ಶವಾಗಿ ಲುಲು ತಯಾರಿಸಿದ ಮಣ್ಣಿನ ಮಡಕೆಗಳನ್ನು ಅವರು ಅನಾವರಣಗೊಳಿಸಿದರು.
ಪಕ್ಷಿಗಳು ನೀರು ಸಿಗದೇ ಪರದಾಡುತ್ತಿರುವ ಈ ಸಂದರ್ಭದಲ್ಲಿ ಜೀವಜಲವನ್ನು ಖಾತ್ರಿ ಪಡಿಸುವುದು ಮಾನವರೆಲ್ಲರ ಜವಾಬ್ದಾರಿ ಎಂಬ ಸಂದೇಶವನ್ನೂ ಹಂಚಿಕೊಂಡರು. ನಾರಾಯಣನ್ ಮಾತನಾಡಿ, ಅತ್ಯಂತ ದತ್ತಿ ಚಟುವಟಿಕೆಗಳು ಮತ್ತು ಸ್ವಯಂಸೇವಕ ಸೇವೆಗಳನ್ನು ನಿರ್ವಹಿಸುತ್ತಿರುವ ಲುಲು ಮಾಲಕ ಎಂಎ ಯೂಸಫಲಿಯ ಕಾರುಣ್ಯ ಚಟುವಟಿಕೆ ಮಾದರಿಯಾದುದು ಎಂದರು.
ಲುಲುಮಾಲ್‍ನ ವಿವಿಧ ಸ್ಥಳಗಳಲ್ಲಿ ಮಣ್ಣಿನ ಮಡಿಕೆಗಳ ವ್ಯವಸ್ಥೆಯನ್ನು ನಾರಾಯಣನ್, ಲುಲು ಪ್ರಾಜೆಕ್ಟ್ ನಿರ್ದೇಶಕ ಬಾಬು ವರ್ಗೀಸ್, ಲುಲು ಇಂಡಿಯಾ ಮೀಡಿಯಾ ಮುಖ್ಯಸ್ಥ ಎನ್.ಬಿ. ಸ್ವರಾಜ್ ಮತ್ತಿತರರು ಅನಾವರಣಗೊಳಿಸಿದರು.
ಆಲುವಾ ತಿರ್ತಿತ್ತಂನವರಾದ ನಾರಾಯಣನ್ ಅವರು ಪಕ್ಷಿಗಳಿಗೆ ನೀರು ಸುರಿಯಲು ಒಂದೂವರೆ ಲಕ್ಷಕ್ಕೂ ಹೆಚ್ಚು ಮಣ್ಣಿನ ಮಡಕೆಗಳನ್ನು ವಿತರಿಸಿದ್ದಾರೆ. ಆಲುವಾದ ಕೀರ್ಮಾಡ್ ಮತ್ತು ಪರವೂರಿನ ತಟ್ಟಪಿಲ್ಲಿಯಲ್ಲಿ ತಯಾರಿಸಿದ ಮಡಿಕೆಗಳನ್ನು ಖರೀದಿಸಿ ರಾಜ್ಯಾದ್ಯಂತ ಮನೆ ಮತ್ತು ಸಂಸ್ಥೆಗಳಿಗೆ ವಿತರಿಸುತ್ತಿದ್ದಾರೆ. ಮಾರ್ಚ್ 2022 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‍ನ 87 ನೇ ಸಂಚಿಕೆಯಲ್ಲಿ, ್ಲ ಕೇರಳೀಯರ ಹೆಮ್ಮೆಯ ಕ್ಷಣಗಳೆಂಬಂತೆ ನಾರಾಯಣನ್ ಅವರ ಕೆಲಸವನ್ನು ಉಲ್ಲೇಖಿಸಿದ್ದರು. ಪಕ್ಷಿಗಳಿಗೆ ನೀರುಣಿಸುವ ಪೋಷಕಗಳನ್ನು ಒದಗಿಸುವ, ಸಸಿ, ಬೇವಿನ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಅಪ್ರತಿಮ ಮುಖ ಎನಿಸಿಕೊಂಡಿದ್ದಾರೆ.