ಕೊಚ್ಚಿ: ಬಾಹ್ಯಾಕಾಶ ಪರಿಶೋಧನೆಗಾಗಿ ಭಾರತದ ಅತಿ ದೊಡ್ಡ ರಾಕೆಟ್ ಎಲ್.ವಿ.ಎಂ. 3 ನಿರ್ಮಾಣದಲ್ಲಿ ಖಾಸಗಿ ವಲಯವನ್ನು ತೊಡಗಿಸಿಕೊಳ್ಳಲು ಈಗಾಗಲೇ ಪ್ರಯತ್ನಗಳು ಪ್ರಾರಂಭವಾಗಿವೆ. ಭವಿಷ್ಯದಲ್ಲಿ ಗಗನ್ ಯಾನ್ ಮತ್ತು ಬಾಹ್ಯಾಕಾಶ ನಿಲ್ದಾಣದಂತಹ ಯೋಜನೆಗಳನ್ನು ಇಸ್ರೋ ಮತ್ತು ಖಾಸಗಿ ಕಂಪನಿಗಳ ಒಕ್ಕೂಟವು ನಿರ್ವಹಿಸುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಹೇಳಿದರು.
ಅವರು ಜೈಜಿ ಪೀಟರ್ ಫೌಂಡೇಶನ್ ಮತ್ತು ಚಾವರ ಸಾಂಸ್ಕøತಿಕ ಕೇಂದ್ರದ ಆಶ್ರಯದಲ್ಲಿ ಚಾವರ ಸಾಂಸ್ಕೃತಿಕ ಕೇಂದ್ರದಲ್ಲಿ 27ನೇ ಜೈಜಿ ಪೀಟರ್ ಸಂಸ್ಮರಣಾ ಸಮ್ಮೇಳನ ಮತ್ತು ಪರಿಸರ ಚರ್ಚೆ ಪರಿಸರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಾಹ್ಯಾಕಾಶ ಸಂಶೋಧನೆಗೆ ಹಣವನ್ನು ಏಕೆ ಖರ್ಚು ಮಾಡಬೇಕು ಎಂಬ ಪ್ರಶ್ನೆಗಳು ನಿರಂತರವಾಗಿ ಕೇಳಿಬರುತ್ತಿದೆ. ಚಂದ್ರನ ಮೇಲೆ ಮನುಷ್ಯನನ್ನು ಇಳಿಸಲು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಮಾಡಿದ ಬಂಡವಾಳ ದೇಶವನ್ನು ವಿಶ್ವದ ಮುಂಚೂಣಿಗೆ ಕೊಂಡೊಯ್ಯಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯುವ ಮೂಲಕ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಬಹುದು. ಅದನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ದೇಶದ ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ಸೋಮನಾಥ್ ಹೇಳಿದರು
ಫೌಂಡೇಶನ್ ಅಧ್ಯಕ್ಷ ಜೋಸೆಫ್ ಜೆ. ಕರೂರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ವಿ.ಕೆ. ರವಿವರ್ಮ ತಂಬುರಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಫೌಂಡೇಶನ್ ಪೋಷಕ ಜೋಸ್ ಪೀಟರ್ ಇಸ್ರೋ ಅಧ್ಯಕ್ಷರನ್ನು ಗೌರವಿಸಿ ಅಭಿನಂದಿಸಿದರು. ಮಾಜಿ ಮಾಹಿತಿ ಆಯುಕ್ತ ಕೆ.ವಿ. ಸುಧಾಕರನ್, ಚಾವರ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಫಾ. ಅನಿಲ್ ಫಿಲಿಪ್ ಮಾತನಾಡಿದರು.