ತಿರುವನಂತಪುರಂ: ಸಮುದ್ರ ಪ್ರಕ್ಷುಬ್ದ ವಿದ್ಯಮಾನದಿಂದಾಗಿ ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಕರಾವಳಿಯಲ್ಲಿ ನೀಡಲಾಗಿದ್ದ ರೆಡ್ ಅಲರ್ಟ್ ಅನ್ನು ಹಿಂಪಡೆಯಲಾಗಿದೆ. ಬದಲಾಗಿ ಆರೆಂಜ್ ಎಚ್ಚರಿಕೆಯನ್ನು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಪ್ರಕ್ಷುಬ್ದತೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯೂ ಇದೆ. ಹೀಗಾಗಿ ಶನಿವಾರ ರಾತ್ರಿ 8 ಗಂಟೆಗೆ ಕೇರಳದ ಕರಾವಳಿಯಲ್ಲಿ ಕಡಲ್ಕೊರೆತ ಸಂಭವಿಸುವ ಸಂಭವವಿದ್ದು, ತೀವ್ರ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರಿಕೆ ವಹಿಸಬೇಕು. ಕರಾವಳಿ ಪ್ರದೇಶದಲ್ಲಿ ವಾಸಿಸುವ ಮತ್ತು ಮೀನುಗಾರಿಕೆಗೆ ಹೋಗುವವರು ಜಾಗರೂಕರಾಗಿರಬೇಕು. ಮೀನುಗಾರಿಕಾ ಹಡಗುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಎಚ್ಚರಿಸಲಾಗಿದೆ.