ಮುಂಬೈ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡುತ್ತಿರುವ ಹೇಳಿಕೆ ವಿರುದ್ಧ ಕೇಂದ್ರದ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ.

ಈ ಹೇಳಿಕೆ ನೀಡದಂತೆ ರಾಹುಲ್ ಗಾಂಧಿ ಮೇ;ಲೆ ನಿರ್ಬಂಧ ಹೇರಬೇಕು ಎಂದು ಹಿರಿಯ ದಲಿತ ನಾಯಕರೂ ಆಗಿರುವ ಅಠಾವಳೆ ಒತ್ತಾಯಿಸಿದ್ದಾರೆ.
'ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ರಾಹುಲ್ ಗಾಂಧಿ ಪದೇ ಪದೇ ಹೇಳುತ್ತಿದ್ದಾರೆ. ಈ ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಅಲ್ಲಗಳೆದಿದ್ದಾರೆ. ಹಾಗಾಗಿ, ಇಂತಹ ಹೇ:ಳಿಕೆ ನೀಡದಂತೆ ಅವರ ಮೇಲೆ ನಿರ್ಬಂಧ ಹೇರುವಂತೆ ದೂರು ನೀಡಿದ್ದೇನೆ'ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ(ಆರ್‌ಪಿಐ) ಅಧ್ಯಕ್ಷರೂ ಆಗಿರುವ ಅಠಾವಳೆ ಹೇಳಿದ್ದಾರೆ.
ಇತ್ತೀಚೆಗೆ, ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್, ಬಿಜೆಪಿಯಿಂದ ಸಂವಿಧಾನಕ್ಕೆ ಅಪಾಯವಿದೆ. ಅದಕ್ಕಾಗಿ 400ಕ್ಕೂ ಅಧಿಕ ಸ್ಥಾನ ಕೇಳುತ್ತಿದ್ದಾರೆ. 'ಇಂಡಿಯಾ' ಬಣ ಸಂವಿಧಾನದ ರಕ್ಷಣೆಗೆ ಹೋರಟ ನಡೆಸುತ್ತಿದೆ ಎಂದಿದ್ದರು.
ಬಡವರು, ದೀನ ದಲಿತರ ಪರವಾಗಿರುವ ಸಂವಿಧಾನವನ್ನು ಬದಲಿಸಲು ಮೋದಿ ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.