ಕಾಸರಗೋಡು: ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಣಿಕೆ ಕೋಷ್ಟಕಗಳು, ಆರ್.ಓ, ಎಆರ್‍ಓ ಟೇಬಲ್‍ಗಳಿಗೆ ಹಾಗೂ ಅಂಚೆ ಮತ ಎಣಿಕೆ ಟೇಬಲ್‍ಗಳಲ್ಲಿ ಪ್ರತಿ ಅಭ್ಯರ್ಥಿಗೆ ಏಜೆಂಟರನ್ನು ನಿಯೋಜಿಸುವಂತೆ ಸೂಚಿಸಲಾಯಿತು. ಮತ ಎಣಿಕೆ ನಡೆಯುವ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಯಮುನಾ ಬ್ಲಾಕ್‍ನಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಎಣಿಕೆ ನೇರಪ್ರದರ್ಶನ ಮಾಡಲಾಗುವುದು. ಮತ ಎಣಿಕೆ ಕೇಂದ್ರ ಪ್ರವೇಶಿಸುವ ಏಜೆಂಟರಿಗೆ ಬ್ಯಾಡ್ಜ್ ನೀಡಲಾಗುವುದು. ಬ್ಯಾಡ್ಜ್ ಹಂಚಿಕೆಗಾಗಿ ಏಜೆಂಟರು ನಮೂನೆ 18 ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಸಹಾಐಕ ಜಿಲ್ಲಾಧಿಕಾರಿ ಪಿ. ಅಖಿಲ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ. ರಂಜಿತ್, ಅಬ್ದುಲ್ಲ ಕುಞÂ ಚೆರ್ಕಳ, ಎಂ.ಕುಞಂಬು ನಂಬಿಯಾರ್, ಬಾಲಕೃಷ್ಣ ಶೆಟ್ಟಿ, ಬಿ.ಎಂ.ಜಮಾಲ್ ಪಟೇಲ್, ಕೆ.ಪಿ.ಸತೀಶ್ಚಂದ್ರನ್, ಕೆ.ಎ.ಮುಹಮ್ಮದ್ ಹನೀಫ್, ಅರ್ಜುನನ್ ತಾಯಲಂಗಡಿ, ಸಿ. ಶಿವಶಂಕರನ್, ಪಿ.ಕೆ.ಫೈಸಲ್ ಮೊದಲಾದವರು ಭಾಗವಹಿಸಿದ್ದರು. ಮತ ಎಣಿಕೆ ಸಂಬಂಧಿಸಿ ಮೇ 24ರಂದು ಮತ್ತೊಮ್ಮೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಲು ಸಭೆಯಲ್ಲಿನಿರ್ಧರಿಸಲಾಯಿತು.