ಸೋಲ್: ನೆರೆಹೊರೆಯ ರಾಷ್ಟ್ರದೊಂದಿಗೆ ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ಬೃಹತ್ ಬಲೂನ್‌ಗಳನ್ನು ಬಳಸಿಕೊಂಡು 'ಕಸ' ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೋಲ್: ನೆರೆಹೊರೆಯ ರಾಷ್ಟ್ರದೊಂದಿಗೆ ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ಬೃಹತ್ ಬಲೂನ್‌ಗಳನ್ನು ಬಳಸಿಕೊಂಡು 'ಕಸ' ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ತಡರಾತ್ರಿ ಉತ್ತರ ಕೊರಿಯಾದಿಂದ ಕಳುಹಿಸಲಾದ ಸುಮಾರು 260 ಬಲೂನ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸೋಲ್‌ನ ಗಡಿ ಪ್ರದೇಶ ಸೇರಿದಂತೆ ದಕ್ಷಿಣ ಕೊರಿಯಾದ ವಿವಿಧ ಸ್ಥಳಗಳಲ್ಲಿ 'ಕಸ' ತುಂಬಿದ ಚೀಲಗಳನ್ನು ಎಸೆಯಲಾಗಿದೆ ಎಂದು 'ಯೋನ್‌ಹಾಪ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಚೀಲಗಳಲ್ಲಿ ಹಾನಿಗೊಳಗಾದ ವಸ್ತುಗಳು, ಕಾಗದದ ಹಾಳೆಗಳು, ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಟರಿಗಳು, ಗೊಬ್ಬರ, ಶೂಗಳ ಬಿಡಿಭಾಗ ಸೇರಿದಂತೆ ವಿವಿಧ ಕಸವನ್ನು ತುಂಬಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಬಲೂನ್ ಹಾಗೂ ಕಸ ತುಂಬಿರುವ ಚೀಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.