ಜೈಪುರ: ರಾಜಸ್ಥಾನದಲ್ಲಿ ಅಧಿಕ ತಾಪಮಾನ ಪರಿಸ್ಥಿತಿಯು ಮುಂದುವರಿದಿದ್ದು, 22 ವರ್ಷ ವಯಸ್ಸಿನ ಯುವಕ ಸೇರಿ ಇನ್ನೂ ಕೆಲವರು ಉಷ್ಣಾಂಶದ ಕಾರಣಕ್ಕೆ ಮೃತಪಟ್ಟಿದ್ದಾರೆ.
ಜೈಪುರ: ರಾಜಸ್ಥಾನದಲ್ಲಿ ಅಧಿಕ ತಾಪಮಾನ ಪರಿಸ್ಥಿತಿಯು ಮುಂದುವರಿದಿದ್ದು, 22 ವರ್ಷ ವಯಸ್ಸಿನ ಯುವಕ ಸೇರಿ ಇನ್ನೂ ಕೆಲವರು ಉಷ್ಣಾಂಶದ ಕಾರಣಕ್ಕೆ ಮೃತಪಟ್ಟಿದ್ದಾರೆ.
ಪರೀಕ್ಷೆ ಬರೆಯುವ ಸಲುವಾಗಿ ಯುವಕನು ಜೈಪುರದ ಕಾಲೇಜೊಂದಕ್ಕೆ ಬಂದಿದ್ದನು. ಪರೀಕ್ಷಾ ಕೋಣೆಯಿಂದ ಹೊರಬರುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದನು.
ಇದಲ್ಲದೆ ಅಧಿಕ ತಾಪಮಾನದಿಂದಾಗಿ ಜೈಸಲ್ಮೇರ್‌ನಲ್ಲಿ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಅಜಯ್ ಕುಮಾರ್ (28), ಜೋಧ್‌ಪುರದಲ್ಲಿ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್ ಪದಮ್ ಸಿಂಗ್ ಮತ್ತು ಜೈನ ಸಂತರೊಬ್ಬರು ಮೃತಪಟ್ಟಿದ್ದಾರೆ.
ರಾತ್ರಿ ವೇಳೆಯೂ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.