HEALTH TIPS

ಗಾಜಾ ಯುದ್ಧ: ಇಸ್ರೇಲ್ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿದ ಟರ್ಕಿ

             ಅಂಕರಾ: ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸಿ ಇಸ್ರೇಲ್‌  ಜೊತೆಗಿನ ಆಮದು-ರಫ್ತನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾಗಿ ಟರ್ಕಿಯ ವ್ಯಾಪಾರ ಸಚಿವಾಲಯ ತಿಳಿಸಿದೆ.

             'ಇಸ್ರೇಲ್ ಜೊತೆಗಿದ್ದ ಆಮದು--ರಫ್ತು ಸಂಬಂಧವನ್ನು ಕಡಿತಗೊಳಿಸಲಾಗಿದೆ.

ಇದು ಎಲ್ಲಾ ಉತ್ಪನ್ನಗಳಿಗೂ ಅನ್ವಯವಾಗಲಿದೆ' ಎಂದು ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

               ಇಸ್ರೇಲ್ ವಿರುದ್ಧ ತೆಗೆದುಕೊಳ್ಳುತ್ತಿರುವ ಎರಡನೇ ಕ್ರಮ ಇದು ಎಂದು ಹೇಳಿರುವ ಟರ್ಕಿ, ಗಾಜಾಗೆ ಮಾನವೀಯ ನೆರವು ಅನುಮತಿಸುವವರೆಗೂ ಇನ್ನಷ್ಟು ನಿರ್ಬಂಧಗಳು ಹೇರಲಿದ್ದೇವೆ ಎಂದು ತಿಳಿಸಿದೆ.

                 ಕಳೆದ ತಿಂಗಳು ಇಸ್ರೇಲ್‌ಗೆ ಅಲ್ಯಮಿನಿಯಂ, ಸ್ಟೀಲ್‌, ಕಟ್ಟಡ ಕಾಮಗಾರಿ ಸಂಬಂಧಿತ ಉತ್ಪನ್ನಗಳು ಸೇರಿ ಒಟ್ಟು 54 ಬಗೆಯ ಉತ್ಪನ್ನಗಳನ್ನು ರಫ್ತನ್ನು ಟರ್ಕಿ ಸ್ಥಗಿತಗೊಳಿಸಿತ್ತು.

ಟರ್ಕಿಯ ಈ ಕ್ರಮಕ್ಕೆ ಇಸ್ರೇಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಟರ್ಕಿ ಒಪ್ಪಂದಗಳನ್ನು ಮುರಿಯುತ್ತಿದೆ ಎಂದು ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries