ಕೊಟ್ಟಾಯಂ: ಈಗಿನ ಕಡು ಬಿಸಿಲಿನ ವೇಳೆ ಬಾಯಾರಿಕೆ ತಣಿಸಲು ತಣ್ಣೀರು ಸೇವಿಸುವುದರಿಂದ ಮಹಿಳೆಯರ ಕೊರಳ ನರಗಳು ಒಡೆದು ಹಾನಿಗೊಳ್ಳುತ್ತದೆ ಎಂಬ ವಾಟ್ಸ್ಆ್ಯಪ್ ಸಂದೇಶ ಕೊಟ್ಟಾಯಂ ಮೆಡಿಕಲ್ ಕಾಲೇಜಿನ ಹೆಸರಲ್ಲಿ ಹರಿದಾಡುತ್ತಿದ್ದು, ಮಹಿಳೆಯ ಧ್ವನಿಯಲ್ಲಿನ ಸಂದೇಶವು ವೈದ್ಯಕೀಯ ಕಾಲೇಜಿಗೆ ತಿಳಿದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಂದೇಶ ನೀಡಿರುವ ವ್ಯಕ್ತಿ ವೈದ್ಯಕೀಯ ಕಾಲೇಜಿಗೆ ಸೇರಿದವರಲ್ಲ್ಲ. ಈ ಮಹಿಳೆ ವೈದ್ಯಕೀಯ ಕಾಲೇಜು ಅಧಿಕಾರಿಗಳ ಹೆಸರಲ್ಲಿ ಘೋಷಣೆ ಮಾಡಿರುವುದು ಸರಿಯಲ್ಲ. ಈ ವಾಯ್ಸ್ ಕ್ಲಿಪ್ ಜನರಲ್ಲಿ ಭಯ ಹುಟ್ಟಿಸಿದೆ ಎಂಬುದು ವೈದ್ಯಕೀಯ ಕಾಲೇಜು ವಿವರಣೆ ನೀಡಿದೆ. ಕೊಟ್ಟಾಯಂ ವೈದ್ಯಕೀಯ ಕಾಲೇಜು ಹೆಸರಿನಲ್ಲಿ ಇಂತಹ ನಕಲಿ ಸಂದೇಶಗಳ ವಿರುದ್ಧ ಪೋಲೀಸರಿಗೆ ದೂರು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಪಕ್ಕದಲ್ಲಿ ವಾಸಿಸುವ ಮಹಿಳೆ ಎಂದು ಪರಿಚಯಿಸಿಕೊಳ್ಳುವ ಮೂಲಕ ಸಂದೇಶವು ಪ್ರಾರಂಭವಾಗುತ್ತದೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಇದನ್ನು ಸಾಧ್ಯವಾದಷ್ಟು ಹಂಚಿಕೊಳ್ಳಲು ಮಹಿಳೆ ಕೇಳಿಕೊಂಡಿದ್ದಾಳೆ. ಇದನ್ನು ಕೇಳಿದ ಜನಪ್ರತಿನಿಧಿಗಳು ಸೇರಿದಂತೆ ಜನರು ತಮ್ಮ ಗ್ರೂಪ್‍ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.