HEALTH TIPS

ಪಿಒಕೆ ಜನರೇ ಭಾರತ ಸೇರಲು ಇಚ್ಛಿಸುತ್ತಿದ್ದಾರೆ: ರಾಜನಾಥ್ ಸಿಂಗ್

           ವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ತಮ್ಮ ವಾದದಿಂದ ಹಿಂದೆ ಸರಿಯುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

            ಆದರೆ, ಸೇನಾಪಡೆ ಬಳಸಿ ಅದನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ. ಏಕೆಂದರೆ, ಕಾಶ್ಮೀರದ ಅಭಿವೃದ್ಧಿ ನೋಡಿದ ಬಳಿಕ ಅಲ್ಲಿನ ಜನರೇ ಭಾರತ ಸೇರಲು ಇಚ್ಛಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

              ಪಿಟಿಐ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಉತ್ತಮ ಮಟ್ಟದಲ್ಲಿ ಸುಧಾರಿಸಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಅಗತ್ಯವೇ ಇಲ್ಲದಂತ ಸಮಯ ಬರಲಿದೆ ಎಂದು ಹೇಳಿದ್ದಾರೆ.

             'ಪಿಒಕೆ ವಿಚಾರ ಕೇಂದ್ರ ಗೃಹ ಸಚಿವಾಲಯದ ಬಳಿ ಇದೆ. ಅದನ್ನು ವಶಪಡಿಸಿಕೊಳ್ಳಲು ಭಾರತ ಸೇನೆ ಬಳಕೆ ಸೇರಿದಂತೆ ಏನೂ ಮಾಡುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬದಲಾಗಿರುವ ರೀತಿ ಮತ್ತು ಆರ್ಥಿಕ ಪ್ರಗತಿ ಹಾಗೂ ಶಾಂತಿ ಮರುಕಳಿಸಿರುವುದನ್ನು ನೋಡಿ ಪಿಒಕೆ ಜನರಿಂದಲೇ ಭಾರತದ ಜೊತೆ ವಿಲೀನಗೊಳ್ಳುವ ಬೇಡಿಕೆ ಬರಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

               ಪರಿಸ್ಥಿತಿ ಸುಧಾರಿಸಿದ್ದು, ಶೀಘ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಾಗಿ ಅವರು ಹೇಳಿದ್ದಾರೆ.

              ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ನಾವು ಬಿಡೆವು ಎಂದು ಎಚ್ಚರಿಸಿದ್ದಾರೆ.

              ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ 2019ರ ಫೆಬ್ರುವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರಗಾಮಿ ತರಬೇತಿ ಕೇಂದ್ರವನ್ನು ಭಾರತದ ಯುದ್ಧ ವಿಮಾನಗಳು ಧ್ವಂಸಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries