ಕಾಸರಗೋಡು: ಪೆರಿಯ ಜೋಡಿ ಕೊಲೆ ಪ್ರಕರಣದ ಆರೋಪಿಯ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ವಿವಾದದ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಮೋದ್ ಪೆರಿಯ ವಿರುದ್ಧ ಕ್ರಮ ಜರುಗಿಸಲಾಗಿದೆ.
ಪ್ರಮೋದ್ ಅವರನ್ನು ಪೆರಿಯ ಕ್ಷೇತ್ರದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಬದಲಿಗೆ ಬ್ಲಾಕ್ ಸಮಿತಿ ಅಧ್ಯಕ್ಷ ಕೆ.ವಿ.ಭಕ್ತವತ್ಸನ್ ಅವರಿಗೆ ಪ್ರಭಾರ ನೀಡಲಾಗಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆ ಪ್ರಕರಣದ 13ನೇ ಆರೋಪಿ ಬಾಲಕೃಷ್ಣನ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಪೆರಿಯ ಕಾಂಗ್ರೆಸ್ ಕ್ಷೇತ್ರದ ಅಧ್ಯಕ್ಷ ಪ್ರಮೋದ್ ಪೆರಿಯಾ ಭಾಗವಹಿಸಿದ್ದರು. ಮೊನ್ನೆ ಪೆರಿಯದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು.
ವರ ಡಾ. ಆನಂದ್ ಕೃಷ್ಣನ್ ಅವರ ಆಹ್ವಾನದ ಮೇರೆಗೆ ವಿವಾಹ ಸಮಾರಂಭಕ್ಕೆ ತೆರಳಿದ್ದೆ ಎಂದು ಪ್ರಮೋದ್ ಪೆರಿಯ ವಿವರಿಸಿರುವರು. ಜಿಲ್ಲೆಯಲ್ಲಿ ಸಿಪಿಎಂ ವಿರುದ್ಧ ಪೆರಿಯ ಕೊಲೆಯನ್ನು ಕಾಂಗ್ರೆಸ್ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಾಗ ಕ್ಷೇತ್ರದ ಅಧ್ಯಕ್ಷರು ಆರೋಪಿಯ ಮಗನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಅಚ್ಚರಿ ಮೂಡಿಸಿದೆ. ಪ್ರಮೋದ್ ಪೆರಿಯ ಅವರು ಪೆರಿಯ ಸೇವಾ ಸಹಕಾರಿ ಬ್ಯಾಂಕ್‍ನ ನಿರ್ದೇಶಕರೂ ಆಗಿದ್ದಾರೆ.
ಫೆಬ್ರವರಿ 17, 2019 ರಂದು ಕಾಸgಗೋಡು ಕಲ್ಯೋಟ್‍ನಲ್ಲಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಕಡಿದು ಹತ್ಯೆ ಮಾಡಲಾಗಿತ್ತು. ಪ್ರಕರಣದ 24 ಆರೋಪಿಗಳ ಪೈಕಿ 16 ಮಂದಿ ಜೈಲಿನಲ್ಲಿದ್ದಾರೆ. ಸಿಪಿಎಂ ನಾಯಕ ಪೀತಾಂಬರನ್ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ.