ಕಾಸರಗೋಡು: ಒಂಬತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣದ ಆರೋಪಿಯ ಚಿತ್ರವನ್ನು ಪೋಲೀಸರು ಬಿಡುಗಡೆಗೊಳಿಸಿದ್ದು, ಮಡಿಕೇರಿ ಮೂಲದ ಪಿ.ಎ.ಸಲೀಂ ಎಂಬಾತನ ಚಿತ್ರ ಬಿಡುಗಡೆಯಾಗಿದೆ.
ಹೊಸದುರ್ಗ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘೋರ ಅಪರಾಧ ಎಸಗಿ ಸಲೀಂ ಕರ್ನಾಟಕಕ್ಕೆ ತಲೆಮರೆಸಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. ಈತನಿಗಾಗಿ ಕೇರಳ-ಕರ್ನಾಟಕ ಗಡಿಯಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಸಲೀಂ ತನ್ನ ಹೆಂಡತಿಯೊಂದಿಗೆ ಹುಡುಗಿಯ ನೆರೆಹೊರೆಯಲ್ಲಿ ವರ್ಷಗಳಿಂದ ವಾಸಿಸುತ್ತಿದ್ದಾನೆ. ಕಾಸರಗೋಡು ಮೇಲ್ಪರಂಬ ಪೆÇಲೀಸರು ದಾಖಲಿಸಿರುವ ಪೋಕ್ಸೋ ಪ್ರಕರಣದಲ್ಲಿ ಸಲೀಂ ಆರೋಪಿಯಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಾಸರಗೋಡು ಪೆÇಲೀಸ್ ಮುಖ್ಯಸ್ಥ ಪಿ ಬಿಜೋಯ್ ನೇತೃತ್ವದಲ್ಲಿ ಮೂವರು ಡಿವೈಎಸ್ಪಿಗಳ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಕಳೆದ ಬುಧವಾರ ಬೆಳಗ್ಗೆ ಮಲಗಿದ್ದ ಮಗುವನ್ನು ಅರ್ಧ ಕಿ.ಮೀ ದೂರದಲ್ಲಿರುವ ಗುಡ್ಡ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಬಾಲಕಿಯ ಕಿವಿಯೋಲೆಯನ್ನು ಅಪಹರಿಸಿದ್ದ ಸಲೀಂ.ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವ ನಿರೀಕ್ಷೆಯಿದೆ.