ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ಪಿ. ಗಂಗಾಧರ ನಾಯರ್ ಅವರ ನಾಲ್ಕನೇ ಸಂಸ್ಮರಣಾ ವಾರ್ಷಿಕ ಮಂಡಲ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನೇತಾರ ಮಾಜಿ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಜಿ. ಚಂದ್ರಹಾಸ ರೈ ಪುಷ್ಪಾರ್ಚನೆಗೈದು ಉದ್ಘಾಟಿಸಿದರು.ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್. ಮಾನ್ಯ. ಕರ್ಷಕ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಶಾಫಿ ಗೋಳಿಯಡ್ಕ. ಜಗದೀಶ್, ಶ್ರೀನಾಥ್, ರಾಮಕೃಷ್ಣ ವಿದ್ಯಾಗಿರಿ, ವಸಂತಿ ಭಾಗವಹಿಸಿದ್ದರು.