HEALTH TIPS

ಇಸ್ರೇಲ್‌ನಲ್ಲಿನ ಅಲ್-ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

             ಟೆಲ್ ಅವಿವ್‌ಕತಾರ್ ಮಾಲೀಕತ್ವದ ಅಲ್‌-ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಿಳಿಸಿದ್ದಾರೆ.

             ಈ ಬಗ್ಗೆ ಎಕ್ಸ್‌ ತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

           ಯಾವಾಗಿನಿಂದ ಈ ನಿರ್ಧಾರ ಜಾರಿಗೆ ಬರಲಿದೆ. ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲಾಗುತ್ತದೆಯೋ ಎನ್ನುವುದರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ.

              ಈ ಕ್ರಮದಿಂದಾಗಿ ಅಲ್‌-ಜಜೀರಾ ಮತ್ತು ಇಸ್ರೇಲ್ ನಡುವಿನ ದೀರ್ಘಕಾಲಿನ ಕಲಹ ಮತ್ತೊಂದು ಹಂತ ತಲುಪಿದೆ. ಅಲ್-ಜಜೀರಾ ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದು ಇಸ್ರೇಲ್ ಪದೇ ಪದೇ ಆರೋಪಿಸುತ್ತಾ ಬಂದಿತ್ತು.

               ಗಾಜಾ ಯುದ್ಧಭೂಮಿಯಲ್ಲಿ ವರದಿ ಮಾಡುತ್ತಿರುವ ಕೆಲವು ವಾಹಿನಿಗಳ ಪೈಕಿ ಅಲ್‌-ಜಜೀರಾವೂ ಒಂದು. ಗಾಜಾದಲ್ಲಿ ಇಸ್ರೇಲ್‌ನ ಬಾಂಬ್‌ ದಾಳಿ, ಜನರಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳ ಬಗ್ಗೆ ವಾಹಿನಿ ವರದಿ ಮಾಡಿತ್ತು. ಹೀಗಾಗಿ ಹಮಾಸ್‌ ಜೊತೆ ವಾಹಿನಿ ಒಪ್ಪಂದ ಮಾಡಿಕೊಂಡಿದೆ ಎಂದು ಇಸ್ರೇಲ್ ದೂರಿತ್ತು.

                 ಇಸ್ರೇಲ್ ಸರ್ಕಾರದ ಈ ಕ್ರಮದ ಬಗ್ಗೆ ತಕ್ಷಣದ ಪ್ರತಿಕ್ರಿಯೆಗೆ ವಾಹಿನಿ ಲಭ್ಯವಾಗಿಲ್ಲ.

ಅಲ್‌-ಜಜೀರಾಗೆ ಕತಾರ್ ಸರ್ಕಾರ ಬಂಡವಾಳ ಹೂಡಿದೆ. ಅರೆಬಿಕ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸುದ್ದಿ ಪ್ರಸಾರ ಮಾಡುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries