ತಿರುವನಂತಪುರಂ: ತಿರುವನಂತಪುರಂ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬಲೂನ್ ಮತ್ತು ಗಾಳಿಪಟ ಹಾರಿಸುವುದನ್ನು ನಿಷೇಧಿಸಲಾಗಿದೆ. ವಿಮಾನ ನಿಲ್ದಾಣದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ವಸ್ತುಗಳನ್ನು ಹಾರಿಸಬಾರದು ಎಂದು ನಗರ ಪೆÇಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಬಲೂನ್‍ಗಳು ಮತ್ತು ಗಾಳಿಪಟಗಳ ಹೊರತಾಗಿ, ಹೈ ರೇಜರ್ ಕ್ರ್ಯಾಕರ್‍ಗಳು ಮತ್ತು ಸ್ಕೈವಲ್ರ್ಡ್ ಲೇಸರ್ ಬೀಮ್ ಲೈಟ್‍ಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ. ವಿಮಾನ ಲ್ಯಾಂಡಿಂಗ್ ಆಗುವ ದಿಕ್ಕಿಗೆ ಲೈಟ್ ಹಾಕಿದರೆ ಅಪಾಯ ಎದುರಾಗುತ್ತದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅಂತಹ ವಸ್ತುಗಳನ್ನು ನಿμÉೀಧಿಸಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ.