ಕೊಚ್ಚಿ: ಮುಖ್ಯಮಂತ್ರಿಗಳು ತಮಗೆ ಮಾಹಿತಿ ನೀಡದೆ ವಿದೇಶಕ್ಕೆ ತೆರಳಿದ್ದಾರೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಪ್ರವಾಸದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಮಾಧ್ಯಮಗಳಿಗೆ ಧನ್ಯವಾದಗಳು ಎಂದೂ ತಿಳಿಸಿರುವರು.
ಮುಖ್ಯಮಂತ್ರಿಗಳು ತಮ್ಮ ಹಿಂದಿನ ವಿದೇಶ ಪ್ರವಾಸಗಳ ಬಗ್ಗೆ ರಾಜಭವನಕ್ಕೆ ಮಾಹಿತಿ ನೀಡಿಲ್ಲ. ರಾಜ್ಯ ಸರ್ಕಾರ ರಾಜಭವನವನ್ನು ಕತ್ತಲಲ್ಲಿ ಇಡುವ ನಿಲುವು ತಳೆಯುತ್ತಿದೆ ಎಂದರು.
ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಕಳುಹಿಸಿರುವುದಾಗಿ ಕೊಚ್ಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಏತನ್ಮಧ್ಯೆ, ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಘಟನೆ ಬಗ್ಗೆ ಆನಂದ ಬೋಸ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು 12 ದಿನಗಳ ಖಾಸಗಿ ವಿದೇಶ ಪ್ರವಾಸಕ್ಕಾಗಿ ಮೇ 6 ರಂದು ತೆರಳಿರುವರು. ಮುಖ್ಯಮಂತ್ರಿ ಇಂಡೋನೇಷ್ಯಾ, ಸಿಂಗಾಪುರ ಮತ್ತು ಯುಎಇಗೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಗಳು ನಿತ್ಯ ಅಧಿಕೃತ ಪ್ರವಾಸಕ್ಕೆ ವಿದೇಶಕ್ಕೆ ಹೋದಾಗ ಸರ್ಕಾರವೇ ಅಧಿಸೂಚನೆ ಹೊರಡಿಸುತ್ತದೆ. ಆದರೆ ಅಂತಹ ಯಾವುದೇ ಸೂಚನೆಗಳು ಬಂದಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ಈಗಾಗಲೇ ಪ್ರತಿಭಟನೆ ಸೂಚಿಸಿದೆ.