ತಿರುವನಂತಪುರ: ಮಲಬಾರ್‍ನಲ್ಲಿ ಪ್ಲಸ್ ವನ್ ಸೀಟ್ ಸಮಸ್ಯೆಗೆ ಸಂಬಂಧಿಸಿದಂತೆ ಎಂಎಸ್‍ಎಫ್ ನಡೆಸಿರುವ ಪ್ರತಿಭಟನೆ ಸಂಬಂಧಿಸಿ ಸಚಿವ ಶಿವನ್ ಕುಟ್ಟಿ ಮಾತನಾಡಿ, ಈ ವರ್ಷ ಹೆಚ್ಚಿನ ಬ್ಯಾಚುಗಳನ್ನು ಆರಂಭಿಸಲು ಸರ್ಕಾರ ನಿಶ್ಚಯಿಸಿಲ್ಲ ಎಂದು ತಿಳಿಸಿರುವರು.
ಶಾಲೆ ತೆರೆಯುವ ಕುರಿತು ನಡೆದ ಕಾರ್ಮಿಕರು, ಮಹಿಳಾ ಮತ್ತು ಯುವ ಸಂಘಟನೆಗಳ ಸಭೆಯಲ್ಲಿ ಸಚಿವರು ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ ಮಾತನಾಡಿದರು. ಬ್ಯಾಚ್ ಹೆಚ್ಚಿಸಬೇಕು ಮತ್ತು ಹೆಚ್ಚು ಮಕ್ಕಳು ತರಗತಿಯಲ್ಲಿ ಕುಳಿತುಕೊಳ್ಳಬೇಕು ಎಂಬುದು ಕೆಲವರ ಆಲೋಚನೆಯಾಗಿದೆ ಎಂದು ಸಚಿವರು ಹೇಳಿದರು.
ಸೀಟು ವಿಚಾರವಾಗಿ ಶಿಕ್ಷಣ ಸಚಿವರ ಸಭೆಯಲ್ಲೇ ಎಂಎಸ್‍ಎಫ್ ಪ್ರತಿಭಟನೆ ವ್ಯಕ್ತಪಡಿಸಿತ್ತು. ಪ್ಲಸ್ ಒನ್ ಸೀಟುಗಳು ಮಲಬಾರಿನ ಹಕ್ಕು, ಮಲಬಾರ್ ಕೇರಳದಲ್ಲಿದೆ ಎಂಬ ಟೀಶರ್ಟ್ ಹಿಡಿದು ಎಂಎಸ್ ಎಫ್ ಮುಖಂಡ ನೌಫಲ್ ಪ್ರತಿಭಟನೆ ನಡೆಸಿದರು. ಇದರೊಂದಿಗೆ ಎಡ ಸಂಘಟನೆಯ ಪ್ರತಿನಿಧಿಗಳು ನೌಫಲ್ ಅವರನ್ನು ಬಲವಂತವಾಗಿ ಹೊರಹಾಕಿದರು. ನೌಫಲ್ ಕೂಡ ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು. ಕಂಟೋನ್ಮೆಂಟ್ ಪೆÇಲೀಸರು ಆಗಮಿಸಿ ನೌಫಲ್ ನನ್ನು ಬಂಧಿಸಿದ್ದಾರೆ.