ಮುಳ್ಳೇರಿಯ: ದೇಶದ ಅತ್ಯುನ್ನತ ಗೌರವ ಪದ್ಮಶ್ರೀ ಪ್ರಶಸ್ತಿ ಪಡೆದ ಸತ್ಯನಾರಾಯಣ ಬೆಳೇರಿ ಅವರನ್ನು ಪೇರಡ್ಕ ತಾಯತ್ ವೇದಿಕೆ ತರವಾಡು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ತರವಾಡು ಸಮಿತಿ ಅಧ್ಯಕ್ಷ ದಾಮೋದರನ್ ಕಂಡಿಗಾನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಿ. ಪಿ.ವಿ. ಉದ್ಘಾಟಿಸಿ, ಸನ್ಮಾನಿಸಿದರು. ಮುಳಿಯಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಜನಾರ್ದನನ್ ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರನ್ ಪೇರಡ್ಕ ಎಸ್‍ಎಸ್‍ಎಲ್‍ಸಿ, ಪ್ಲಸ್ ಟು ಗಳಲಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ರಾಜನ್ ಪಣಿಕ್ಕರ್ ಕಾನತ್ತೂರ್ ಅವರು ಬುಡಕಟ್ಟು ಜನಾಂಗದ ಆಚಾರ-ವಿಚಾರಗಳ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು. ಪಕೀರನ್ ಮಣಿಯಾಣಿ ಟಿ.ವಿ, ಗೋಪಾಲನ್ ಮಣಿಯಾಣಿ ಟಿ.ವಿ, ತರವಾಡು ಪೋಷಕ ಸುಕುಮಾರನ್ ತಾಯತ್ತಿವೀಡ್, ತರವಾಡು ಸಮಿತಿ ಉಪಾಧ್ಯಕ್ಷ ಪಿ. ರಾಧಾಕೃಷ್ಣನ್, ಕೋಶಾಧಿಕಾರಿ ಬಾಲಕೃಷ್ಣನ್ ಎಡನೀರು, ಮಾತೃ ಸಮಿತಿ ಅಧ್ಯಕ್ಷ ಅರುಣ ನೆಲ್ಲಿಮೊಟ್ಟ, ತರವಾಡ ಸಮಿತಿ ಸದಸ್ಯರಾದ ದಾಮೋದರನ್ ಚೆರ್ಕಾಪರ, ಜಯನ್ ಕೊಡವಂಜಿ ಮಾತನಾಡಿದರು. ತರವಾಡ ಸಮಿತಿಯ ಕಾರ್ಯದರ್ಶಿ ರವಿ ಕೆ ಪಾಂಡಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮಧುಸೂದನನ್ ವಂದಿಸಿದರು.